ಅಮ್ಚಿನಡ್ಕದಲ್ಲಿ ಗುಡ್ಡವೊಂದಕ್ಕೆ ಬೆಂಕಿ | ಆತಂಕಗೊಂಡ ಸ್ಥಳೀಯರು | ತಪ್ಪಿದ ಭಾರೀ ಅನಾಹುತ

ಪುತ್ತೂರು: ಅಮ್ಚಿನಡ್ಕದಲ್ಲಿ ರಬ್ಬರ್ ಗುಡ್ಡೆ ಬಳಿ ಸೋಮವಾರ ಸಂಜೆ ಬೆಂಕಿ ಹತ್ತಿಕೊಂಡ ಪರಿಣಾಮ ಸಮೀಪದ ನಿವಾಸಿಗಳು ಆತಂಕಗೊಂಡಿದ್ದಾರೆ.

ಸಂಜೆ 6:30 ರ ವೇಳೆಗೆ ಅಮ್ಚಿನಡ್ಕ ಎಂಬಲ್ಲಿ ಎನ್ ಎಸ್ ಯು ಐ ಮುಖಂಡ ಎಡ್ವರ್ಡ್ ಡಿಸೋಜ ರವರ ಮನೆಯ ಸಮೀಪ ರಬ್ಬರ್ ಗುಡ್ಡೆ ಬಳಿ ಬೆಂಕಿಯು ಹೊತ್ತಿ ಉರಿದಿದೆ. ಬೆಂಕಿಯನ್ನು ಗಮನಿಸಿದ ಹತ್ತಿರದ ನಿವಾಸಿಯೊಬ್ಬರು ಬೊಬ್ಬೆ ಹೊಡೆದಾಗ ತಕ್ಷಣವೇ ವಿಷಯ ತಿಳಿದ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆಯ ನಾಯಕ ಎಡ್ವರ್ಡ್ ಡಿಸೋಜ ರವರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಇವರ ಜೊತೆಗೂಡಿದ ಊರಿನ ಯುವಕ ಹರೀಶ್ ಎಂಬವರು ಸೇರಿ ಮತ್ತೆ ಉರಿಯುತ್ತಿರುವ ಬೆಂಕಿಗೆ ನೀರು ಸುರಿಯುವ ಪ್ರಯತ್ನ ಮಾಡಿದರು.

ಈ ಇಬ್ಬರು ಯುವಕರು ಸೇರಿ ಆಗಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಊರಿನ ಯುವಕರು ಜೊತೆಸೇರಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top