ದೆಹಲಿ : ಶಿರೋಮಣಿ ಅಕಾಲಿದಳದ ನಾಯಕ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಮತ್ತಿತರ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಕೇಸರಿ ಪಕ್ಷ ಸೇರಿಕೊಂಡರು.
ಭಾರತೀಯ ಜನತಾ ಪಕ್ಷಕ್ಕೆ ಸೇರಲು ಎಸ್‌ಎಡಿ ತೊರೆದ ಅತ್ವಾಲ್, 2004 ರಿಂದ 2009 ರವರೆಗೆ 14 ನೇ ಲೋಕಸಭೆಯ ಉಪ ಸ್ಪೀಕರ್ ಆಗಿದ್ದ ಚರಂಜಿತ್ ಸಿಂಗ್ ಅತ್ವಾಲ್ ಅವರ ಪುತ್ರ ಮತ್ತು ಈ ಹಿಂದೆ ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. ಅತ್ವಾಲ್ ಜೊತೆಗೆ, ಅವರ ಕಿರಿಯ ಸಹೋದರ ಜಸ್ಜೀತ್ ಸಿಂಗ್ ಅತ್ವಾಲ್ ಮತ್ತು ಪಂಜಾಬ್‌ನ ಇತರ ಅನೇಕ ಮಂದಿಗೆ ಬಿಜೆಪಿ ಸೇರಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಯಾರಾದರೂ ನಿಜವಾದ ಅರ್ಥದಲ್ಲಿ ಅನುಷ್ಠಾನಗೊಳಿಸುತ್ತಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವಾಗಿದೆ, ಕೇಂದ್ರದ ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಭಾವಿತನಾಗಿ ಬಿಜೆಪಿ ಸೇರಿರುವುದಾಗಿ ಅತ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
ಸಿಖ್ಖರಿಗಾಗಿ ಕರ್ತಾರ್‌ಪುರ ಕಾರಿಡಾರ್ ನ್ನು ಮತ್ತೆ ತೆರೆದಿದ್ದಕ್ಕಾಗಿ ಮೋದಿಯನ್ನು ಶ್ಲಾಘಿಸಿದ ಅತ್ವಾಲ್, ಪಂಜಾಬ್‌ನಲ್ಲಿ ದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಹೊಸ ಯುಗ ಕ್ಕೆ ನಾಂದಿ ಹಾಡುವ ಅಗತ್ಯವಿದೆ ಎಂದು ಹೇಳಿದರು.