ಪುತ್ತೂರು: ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವನೇ ನಿಜವಾದ ಶಿಕ್ಷಕ ಎಂದು ಉಪ್ಪಿನಂಗಡಿ ಸರಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ, ಹಿರಿಯ ರಂಗಲೇಖಕ ಸುಬ್ಬಪ್ಪ ಕೈ ಕಂಬ ಹೇಳಿದರು.
ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂರು ದಿನಗಳ “ಬಣ್ಣದ ಬಣ್ಣ” ಎಂಬ ಮಕ್ಕಳ ಕಲಿಕಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕ ಕ್ರಿಯಾಶೀಲನಾಗಿದ್ದರೆ ಮಕ್ಕಳು ಕ್ರಿಯಾಶೀಲರಾಗುವುದರಲ್ಲಿ ಸಂಶಯವಿಲ್ಲ ಇಂಥ ಕೆಲಸದಲ್ಲಿ ಪುಣ್ಚಪ್ಪಾಡಿ ಶಾಲೆ ಸಫಲಗೊಂಡಿದೆ ಎಂದರು.
ಹಿರಿಯ ಯಕ್ಷಗಾನ ಆರ್ಥದಾರಿ, ನಿವೃತ್ತ ಶಿಕ್ಷಕ ಗುಡ್ಡಪ್ಪ ಬಲ್ಯ ಸಮಾರೋಪ ಭಾಷಣ ಮಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕನ ಪಾತ್ರ ಬಹಳಷ್ಟು ಇದೆ. ಒಂದು ಅರ್ಥದಲ್ಲಿ ಶಿಕ್ಷಕನ ಪ್ರತಿಫಲನವೇ ಮಕ್ಕಳ ಬೆಳವಣಿಗೆ. ಇಂತಹ ರಂಗ ಶಿಬಿರಗಳು ಮಕ್ಕಳ ಪ್ರತಿಭೆಗೆ ಅರ್ಥಪೂರ್ಣವಾದ ಅವಕಾಶವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕೃಷ್ಣಕುಮಾರ್ ರೈ ಮಾತನಾಡಿ, ಮಗುಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿರುವ ಪುಣ್ಚಪ್ಪಾಡಿ ಶಾಲೆಯ ಶ್ರಮ ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ಪದ್ಮನಾಭ ಬೆಳ್ಳಾರೆ, ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಯುವರಂಗ ನಿರ್ದೇಶಕ ಉದಯ ಸಾರಂಗ್ ಪೆರ್ಲ, ಕರಕುಶಲ ಶಿಕ್ಷಕಿ ಬಕುಳ ನೆಹರು ನಗರ, ಹಕ್ಕಿ ತಜ್ಞ ಅರವಿಂದ ಕುಡ್ಲ, ಚಿತ್ರ ಕಲಾವಿದ ಪದ್ಮನಾಭ ಬೆಳ್ಳಾರೆ ಕಲಾವಿದ ಪ್ರಜಿತ್ ರೈ ಸೂಡಿಮುಳ್ಳು, ಸಂಗೀತ ಶಿಕ್ಷಕಿ ಶುಭ ರಾವ್, ಉಪ್ಪಿನಂಗಡಿ ಸರಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ನಂದೀಶ್ ಮಂಡ್ಯ ಕುಮಾರಿ ದೀಪ್ತಿ ಕುಮಾರಿ ತೇಜಸ್ವಿ ಇವರುಗಳು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ಸ್ವಾಗತಿಸಿ, ಪದವೀಧರ ಶಿಕ್ಷಕಿ ಫ್ಲಾವಿಯ ವಂದಿಸಿದರು. ಅತಿಥಿ ಶಿಕ್ಷಕಿ ಚಂದ್ರಿಕಾ,, ಗೌರವ ಶಿಕ್ಷಕಿ ತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು.