ಪುತ್ತೂರು: ಆಮ್ ಆದ್ಮಿ ಪಾರ್ಟಿಯ ಪುತ್ತೂರು ವಿದಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ವಿಷು ಕುಮಾರ್ ಗೌಡ ಅವರು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಭೇಟಿ ಮಾಡಿದ ಆಪ್ ಅಭ್ಯರ್ಥಿಯನ್ನು ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನ ಕಾರ್ಯದರ್ಶಿ ಪುರುಷೋತ್ತಮ್ ಗೌಡ ಕೋಲ್ಪೆ, ಪುತ್ತೂರು ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ಧನ ಬಂಗೇರ, ಮಂಗಳೂರು ದಕ್ಷಿಣ ಮುಖಂಡ ನವೀನ್ ಚಂದ್ರ ಪೂಜಾರಿ, ಕಾನೂನು ಸಲಹೆಗಾರ ಉದಯಶಂಕರ್, ಮುಖಂಡರಾದ ಸಯ್ಯದ್ ನಿಸಾರ್, ವಿಕಾಸ್ ಉಪಸ್ಥಿತರಿದ್ದರು.
























