ಮಹಾಲಿಂಗೇಶ್ವರನ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ | ಏಕಕಾಲದಲ್ಲಿ ಎರಡೂ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 10ರಿಂದ 20ರ ತನಕ ನಡೆಯಲಿರುವ ವೈಭವದ ಜಾತ್ರೋತ್ಸವಕ್ಕೆ ಶನಿವಾರ ಹೊರೆಕಾಣಿಕೆ ಸಮರ್ಪಣೆಯಾಯಿತು.

ಅಪರಾಹ್ನ 3.30ಕ್ಕೆ ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರು ಸೀಮೆ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಹೊರೆಕಾಣಿಕೆ ದರ್ಬೆ ವೃತ್ತ ಹಾಗೂ ಬೊಳುವಾರಿನ ಸುಬ್ರಹ್ಮಣ್ಯ ನಗರದಲ್ಲಿ ಸೇರಿ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ದರ್ಬೆ ವೃತ್ತದಲ್ಲಿ‌ ಶ್ರಿ ವಜ್ರದೇಹಿ ಮಠದ‌ ಶ್ರೀ ರಾಜಶೇಖರಾನಂದ‌ ಸ್ವಾಮಿಜಿ ತೆಂಗಿನಕಾಯಿ‌ ಒಡೆಯುವ ಮೂಲಕ‌ ಉದ್ಘಾಟಿಸಿದರು.

ಬಳಿಕ ಹೊರೆಕಾಣಿಕೆ ಮೆರವಣಿಗೆ ಕೊಂಬು, ಕಹಳೆ, ಬ್ಯಾಂಡ್, ಕಲ್ಲಡ್ಕ ಗೊಂಬೆ ಕುಣಿತ, ಭಜನೆಯೊಂದಿಗೆ ಶ್ರೀ ದೇವಸ್ಥಾನಕ್ಕೆ ಆಗಮಿಸಿತು. ಹಸಿರುವಾಣಿ ಮೆರವಣಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆಯುತ್ತಿರುವ 15 ಧಾರ್ಮಿಕ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.































 
 

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಕೆ. ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಬಿ.ಕೆ. ವೀಣಾ, ಡಾ. ಸುಧಾ ಎಸ್. ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಅರುಣ್ ಕುಮಾರ್ ಪುತ್ತಿಲ, ಜಯಂತ್ ನಡುಬೈಲು, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ. ಪ್ರಸನ್ನ, ಜಯಕುಮಾರ್ ರೈ, ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top