ಪುತ್ತೂರು: ಶನಿವಾರ ಸಂಜೆ ಶ್ರೀ ಮಹಾಲಿಂಗೇಶ್ವರ ಜಾತ್ರೆಯ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ, ಚಿಕ್ಕಮುಡ್ನೂರು ಭಾಗದಿಂದಲೂ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ದರ್ಬೆ ಹಾಗೂ ಬೊಳುವಾರಿನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಚಿಕ್ಕಮುಡ್ನೂರು ಭಾಗದ ಭಕ್ತಾದಿಗಳು ಹೊರೆಕಾಣಿಕೆ ಸಮರ್ಪಿಸಿದರು.
ಚಿಕ್ಕಮುಡ್ನೂರು ಗ್ರಾಮದ ಬೀರಿಗ, ಕೆಮ್ಮಾಯಿ, ಬೀರ್ನಹಿತ್ಲು, ಕೃಷ್ಣನಗರ ಮೊದಲಾದ ಭಾಗದ ಭಕ್ತಾದಿಗಳು ಹೊರೆಕಾಣಿಕೆ ಸಮರ್ಪಿಸಿ ಪುನೀತರಾದರು.