ಅಳಿಯನಿಗೆ ಟಿಕೆತ್‌ ಕೈ ತಪ್ಪಿದ ಕಾರಣ ಮಾವ ಕಾಂಗ್ರೆಸ್‌ ಗೆ ರಾಜಿನಾಮೆ

ತುಮಕೂರು : ಕರ್ನಾಟಕ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಸ್ಫೋಟಗೊಂಡಿದೆ. 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿ ಬಿಜೆಪಿ, ಜೆಡಿಎಸ್ ವಿರುದ್ಧ ತೊಡೆತಟ್ಟಿದ್ದ ಕಾಂಗ್ರೆಸ್‌ಗೆ 2ನೇ ಪಟ್ಟಿಯಲ್ಲಿ ಬಂಡಾಯದ ಬೇಗುದಿ ಅಪ್ಪಳಿಸಿದೆ. ಟಿಕೆಟ್ ಸಿಗದ್ದಕ್ಕೆ ರೊಚ್ಚಿಗೆದ್ದಿರುವ ಕೈ ಕಲಿಗಳು ಕಿಚ್ಚು ಹೊತ್ತಿಸಿದ್ದಾರೆ. ಅಲ್ಲದೇ ಟಿಕೆಟ್​ ಕೈತಪ್ಪಿದ್ದಕ್ಕೆ ಒಬ್ಬೊಬ್ಬರೇ ಕಾಂಗ್ರೆಸ್​ಗೆ ಗುಡ್ ಬೈ ಹೇಳುತ್ತಿದ್ದಾರೆ. ತಮಕೂರು, ಚಿತ್ರದುರ್ಗ, ಗೋಕಾಕ್, ಕಲ್ಲಘಟಗಿ ಸೇರಿದಂತೆ ಇತರೆ ಕೆಲ ಕ್ಷೇತ್ರಗಳಲ್ಲಿ ಸಂಭ್ರಮವಿರಬೇಕಾದ ಕಾಂಗ್ರೆಸ್ ಮನೆಯಲ್ಲಿ ಸಮರವೇ ಶುರುವಾಗಿದೆ. ಅದರಂತೆ ತುಮಕೂರು​ ನಗರ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅಳಿಯ ಎಸ್.ರಫೀಕ್ ಅಹ್ಮದ್​ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಷಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಸಮರ್ಥ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯುವ ಮುಖಂಡ ಇಕ್ಬಾಲ್ ಅಹ್ಮದ್​ಗೆ ಟಿಕೆಟ್ ನೀಡಿದ ಹೈ ಕಮಾಂಡ್ ನಿರ್ಧಾರವನ್ನು ಷಫಿ ಅಹ್ಮದ್ ವಿರೋಧಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅಲ್ಪಸಂಖ್ಯಾತರ ಕಾರಣಕ್ಕೆ ಮಾಜಿ ಶಾಸಕ ಷಫಿ ಅಹ್ಮದ್ ಅವರ ಕುಟುಂಬಕ್ಕೆ ಮಣೆ ಹಾಕಲಾಗಿತ್ತು. ಷಫಿ ಎರಡು ಬಾರಿ ಹಾಗೂ ಅವರ ಅಳಿಯ ರಫಿಕ್ ಅಹ್ಮದ್ ಒಂದು ಬಾರಿ ಶಾಸಕರಾಗಿದ್ದರು. ಇದೀಗ ಮೊದಲ ಬಾರಿ ಷಫಿ ಕುಟುಂಬದ ಹೊರಗಿನ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಷಫಿ ಅಹ್ಮದ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದು ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top