ಪುತ್ತೂರು: ಜನಪ್ರತಿನಿಧಿಯವರ ಫೊಟೋದೊಂದಿಗೆ ತನ್ನ ಫೊಟೋವನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಫೊಟೋ ಎಡಿಟ್ ಮಾಡಿ, ವೈರಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಖಾಸಗಿ ಫೊಟೋವನ್ನು ಎಡಿಟ್ ಮಾಡಿ, ಜನಪ್ರತಿನಿಧಿಯೊಂದಿಗೆ ಜೋಡಿಸಲಾಗಿದೆ. ಈ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ದೌರ್ಜನ್ಯ ನಡೆಸಲಾಗುತ್ತಿದೆ. ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಇಂತಹ ಘಟನೆಯಿಂದಾಗಿ ತನಗೆ ಹಾಗೂ ತನ್ನ ಮನೆಮಂದಿಗೆ ತೀವ್ರ ನೋವಾಗಿದೆ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಫೊಟೋವನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಫೊಟೋದಲ್ಲಿರುವ ಜನಪ್ರತಿನಿಧಿಗೂ ತನಗೂ ಯಾವುದೇ ಸಂಬಂಧವಿಲ್ಲ. ವೃಥಾ ಆರೋಪ ಮಾಡುವುದು ಸರಿಯಲ್ಲ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.
ಈ ಕುರಿತಾಗಿ ಮಹಿಳೆ ವೀಡಿಯೋ ಹೇಳಿಕೆಯನ್ನು ಹೊರಬಿಟ್ಟಿದ್ದಾರೆ.