ಪೂಜಾ ವಿಧಿ ನೆರವೇರಿಸುವಾಗ ದುರಂತ- ಮಡಿದವರೆಲ್ಲ ಯುವ ಅರ್ಚಕರು
ಚೆನ್ನೈ : ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೂವರಸನ್ ಪೇಟೆಯಲ್ಲಿ ನಡೆದಿದೆ.
25 ಮಂದಿ ಅರ್ಚಕರ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ. ಅವರನ್ನು ಸೂರ್ಯ (24) ರಾಘವನ್ (22) ಯೋಗೇಶ್ವರನ್ (23) ವನೀಶ್ (20) ರಾಘವನ್ (18) ಎಂದು ಗುರುತಿಸಲಾಗಿದೆ. ಈ ಅರ್ಚಕರ ತಂಡ ಮೂವರಸನ್ ಪೇಟೆಯ ಧರ್ಮಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಈ 25 ಮಂದಿ ಅರ್ಚಕರು ಕಲ್ಯಾಣಿಗೆ ತೆರಳಿದ್ದರು. ಈ ವೇಳೆ 5 ಮಂದಿ ನೀರಿನಲ್ಲಿ ಮುಳುಗಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.