ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಏ.5 ರಿಂದ 7 ರ ತನಕ ನಡೆಯುವ ಜಾತ್ರೋತ್ಸವದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಮಂಗಳವಾರ ನಡೆಯಿತು.
ಸಂಜೆ ಕೊಡಿಪಾಡಿ ಶಾಲೆ, ಆನಾಜೆ, ಅರ್ಕ, ಓಜಾಲ, ಹನಿಯೂರು, ಪಲ್ಲತ್ತಾರು ಮೂಲಕ ಹಸಿರುವಾಣಿ ಮೆರವಣಿಗೆ ಸಾಗಿ ಬಂದ ಮೆರವಣಿಗೆಗೆ ಚೆಂಡೆ, ವಾದ್ಯಗಳು, ಮುತ್ತು ಕೊಡೆಗಳು ಮೆರೆಗು ನೀಡಿತು.

ಬಳಿಕ ತೆಂಕಿಲ ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ಹಲಸಿನಮಕ್ಕಿ ನರಸಿಂಹ ಶಾಸ್ತ್ರೀ ವೀರಚಿತ “ಶ್ರೀರಾಮ ದರ್ಶನ” ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಜನಾರ್ದನ ದೇವರಿಗೆ ರಂಗಪೂಜೆ ನಡೆಯಿತು.