ಪುತ್ತೂರು: ಸುಳ್ಯ ತಾಲೂಕಿನ ಎಣ್ಮೂರು ಶ್ರೀ ಆದಿಬೈದೇರುಗಳ ನೇಮೋತ್ಸವ ಏ.5 ಬುಧವಾರ ರಾತ್ರಿ ನಡೆಯಲಿದೆ.
ಬುಧವಾರ ಮಧ್ಯಾಹ್ನ 12.30 ಕ್ಕೆ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಡುವುದು. ನೇತ್ರಾದಿ ಗರಡಿಯಲ್ಲಿ ದರ್ಶನ. ರಾತ್ರಿ 8 ಕ್ಕೆ ಬೈದೇರುಗಳು ಗರಡಿ ಇಳಿಯುವುದು. ರಾತ್ರಿ 2 ಕ್ಕೆ ಕಿನ್ನಿದಾರು ಗರಡಿ ಇಳಿಯುವುದು.
ಪ್ರಾತಃಕಾಲ 3 .30 ಕ್ಕೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು. 5 ಕ್ಕೆ ಕೋಟಿ-ಚೆನ್ನಯರ ದರ್ಶನ ರಂಗಸ್ಥಳದಲ್ಲಿ (ಸೇಟು) ಬೈದೇರುಗಳ ಸೇಟು, 7 ಕ್ಕೆ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ. ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ರಾತ್ರಿ ನಡೆಯುವ ಎಣ್ಣೂರು ಶ್ರೀ ಆದಿಬೈದೇರುಗಳ ನೇಮೋತ್ಸವ ನ್ಯೂಸ್ ಪುತ್ತೂರಿನಲ್ಲಿ ನೇರಪ್ರಸಾರಗೊಳ್ಳಲಿದೆ.