ಚುನಾವಣೆಗೆ ಸಂಬಂಧಿಸಿ ಕರ್ತವ್ಯ ನಿರ್ವಹಿಸಲು ನಾಲ್ಕು ಸಿಆರ್ ಪಿಎಫ್‍ ಕಂಪೆನಿಗಳು ಜಿಲ್ಲೆಗೆ

ಪುತ್ತೂರು: ದ.ಕ.ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ 2023 ರ ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಲು  4 ಸಿಆರ್ ಪಿಎಫ್ ಕಂಪೆನಿಗಳು ಆಗಮಿಸಿದ್ದು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಚುನಾವಣೆಗೆ ಸಂಬಂಧಿಸಿದಂತೆ ಚೆಕ್ ಪೋಸ್ಟ್, ಸ್ಟ್ರಾಂಗ್ ರೂಮ್, ರೂಟ್ ,ಮಾರ್ಚ್‍, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಂಪೆನಿಗಳು ಕರ್ತವ್ಯ ನಿರ್ವಹಿಸಲಿವೆ.

ಇನ್ನಷ್ಟು ಹೆಚ್ಚಿನ ಸಿಆರ್ ಪಿಎಫ್ ಕಂಪೆನಿಗಳು ಜಿಲ್ಲೆಗೆ ಆಗಮಿಸಲಿವೆ ಎಂದು ತಿಳಿದು ಬಂದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top