ಪುತ್ತೂರು : ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಜ.ಪಂ ಕ್ಷೇತ್ರ ಶಿಕ್ಷಣಾಧಿಕಾರಿ ಯವರ ಕಚೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಸಂಯುಕ್ತ ಆಶ್ರಯದಲ್ಲಿ ಬಣ್ಣದ ಬಣ್ಣ ಎಂಬ ವಿಶಿಷ್ಟ ಮಕ್ಕಳ ಶಿಬಿರ ಏ.6 ರಿಂದ 8ರ ತನಕ ಪುಣ್ಚಪ್ಪಾಡಿ ಶಾಲೆಯಲ್ಲಿ ನಡೆಯಲಿದೆ.
ಕರ್ನಾಟಕದ ಹಿರಿಯ ಶಿಕ್ಷಣ ಚಿಂತಕ, ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಸಂಚಾಲಕ ಕಲಾನಿಧಿ ಗೋಪಾಡ್ಕರ್ ಉದ್ಘಾಟಿಸಲಿದ್ದು ಹಿರಿಯ ರಂಗ ಲೇಖಕ, ಉಪ್ಪಿಂಗಡಿ ಸರಕಾರಿ
ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಸುಬ್ಬಪ್ಪ ಕೈಕಂಬ ಮುಕ್ತಾಯದ ಮಾತುಗಳ ನಾಡಲಿದ್ದಾರೆ. ಅತಿಥಿಗಳಾಗಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಸವಣೂರಿನ ಸಮೂಹ ಸಂಪನ್ ವ್ಯಕ್ತಿ ಕುಶಾಲಪ್ಪ, ಪಿ ಡಿ ಗಂಗಾಧರ್ ರೈ ಕೃಷ್ಣಕುಮಾರ್ ರೈ ಪುಂಚಪಾಡಿ, ವಿಷ್ಣು ಭಟ್ ಅಜಿಲೋಡಿ, ಕುಶಲ ಪಿ ರೈ ಪುಂಚಪಾಡಿ, ಸುಜಯ ಕೆ. ಸುಲಾಯ ವಿಶಾಖ್ ರೈ ತೋಟತಡ್ಕ ಮುಂತಾದವರು ಭಾಗವಹಿಸಲಿದ್ದಾರೆ
ಶಿಬಿರದಲ್ಲಿ ಕಥೆಗೊಂದು ಪಾತ್ರ ಹಾಡಿಗೊಂದು ಹೆಜ್ಜೆ ರಂಗಕ್ಕೊಂದು ರಾಗ ಚಿತ್ರಕೊಂದು ಬಣ್ಣ ಕಾಗದಕೊಂದು ಕ್ರಾಫ್ಟ್ ಕಸಕ್ಕೊಂದು ರೂಪ ಅಗ್ನಿಶಾಮಕ ಮಾಹಿತಿ ಆರೋಗ್ಯ ಜಾಗೃತಿ ಹೀಗೆ ಬೇರೆ ಬೇರೆ ವಿಷಯಗಳ ಕಲಿಕೆ ನಡೆಯಲಿದ್ದು ಕಲಾ ಶಿಕ್ಷಕ ಪದ್ಮನಾಭ ಬೆಳ್ಳಾರೆ, ಯುವ ರಂಗ ನಿರ್ದೇಶಕ ಉದಯ ಸಾರಂಗ್, ಹಕ್ಕಿತಜ್ಞ ಅರವಿಂದ ಕುಡ್ಲ ಕರಕುಶಲ ಶಿಕ್ಷಕಿ ಬಕುಳ, ಚಿತ್ರ ಕಲಾವಿದರಾದ ಪ್ರಜಿತ್ ರೈ ಸೂಡಿ ಮುಳ್ಳು ತೇಜಸ್ವಿ ದೀಪ್ತಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಗಾಯತ್ರಿ ಓಂತಿಮನೆ ಹಾಗೂ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ತಿಳಿಸಿದ್ದಾರೆ.