ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಡಬ ಯುವವಾಹಿನಿ ಘಟಕದ ಸಹಕಾರದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಏಕಹಾ ಭಜನೆ ಸಂಭ್ರಮದಲ್ಲಿ ಉದನೆ ಬನಾರಿ ನಿವಾಸಿ ಚಂದ್ರಶೇಖರ್ ಅವರ ಚಿಕಿತ್ಸೆಯ ನೆರವಾಗಿ ನಿಧಿ ಸಂಗ್ರಹ ಅಭಿಯಾನ ನಡೆಯಿತು.
ಅಭಿಯಾನದಲ್ಲಿ ಸಂಗ್ರಹವಾದ ಹಣ 29,910 ರೂ.ವನ್ನು ಚೆಕ್ ಮೂಲಕ ಸೋಮವಾರ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಕಡಬ ಆರಕ್ಷಕ ಠಾಣಾ ಉಪನಿರೀಕ್ಷ ಹರೀಶ್ ಅವರು ಚಂದ್ರಶೇಖರ್ ಅವರ ಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸೀತಾರಾಮ ಪೊಸವಳಿಕೆ, ಏಕಹಾ ಭಜನೆಯ ಅಧ್ಯಕ್ಷ ಅಜಿತ್ ರೈ ಆರ್ತಿಲ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಗೌರವಧ್ಯಕ್ಷ ಉದಯ್ ಭಟ್, ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಯುವವಾಹಿನಿ ಅಧ್ಯಕ್ಷ ಕೃಷ್ಣಪ್ಪ ಅಮೈ, ಯುವವಾಹಿನಿಯ ಕೇಂದ್ರ ಸಮಿತಿ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ನವೀನ್ ಕೊಂಬಾರು, ಠಾಣಾ ಸಿಬ್ಬಂದಿ ಭವಿತ್ ರೈ, ಏಕಹಾ ಭಜನಾ ಸಮಿತಿ ಕೋಶಾಧಿಕಾರಿ ಸೀತಾರಾಮ ಉಪಸ್ಥಿತರಿದ್ದರು.