ಬೆಳ್ತಂಗಡಿ : ಪಡಂಗಡಿಯಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದ ಘಟನೆ ಮಾ. 30 ರಂದು ಸಂಭವಿಸಿದೆ.
ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆ ಎಂಬಲ್ಲಿ ಮನೆ ಯಜಮಾನ ಜುವಾಮ್ ಗೋವಿಯಸ್ (64) ಅವರಿಗೆ ಹಲ್ಲೆ ನಡೆಸಿದ್ದಾರೆ. ಪರಿಚಿತರಾದ ರಿಯಾಜ್ ಮತ್ತು ಫೈಝಲ್ ಎಂಬವರೇ ಹಣ ಎಗರಿಸಿದ ಆರೋಪಿಗಳು.
ಜುವಾಮ್ ಗೋವಿಯಸ್ ಅವರು ತನ್ನ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮನೆಯಲ್ಲಿ ಈ ಹಿಂದೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಪರಿಚಯದ ರಿಯಾಜ್ ಮತ್ತು ಫೈಝಲ್ ಬಂದು ಕಟ್ಟಿಗೆಯಿಂದ ಹಲ್ಲೆ ನಡೆಸಿದರು. ಬಳಿಕ ಫೋನ್ನಲ್ಲಿದ್ದ ಗೂಗಲ್ ಪೇ ಪಿನ್ ನಂಬರ್ ಪಡೆದು 82,000 ರೂ.ಗಳನ್ನು ಆರೋಪಿಗಳ ಪತ್ನಿಯರ ಹೆಸರಿನ ಖಾತೆಗೆ ವರ್ಗಾಯಿಸಿ ಮೊಬೈಲ್ ಮತ್ತು ಅಂಗಳದಲ್ಲಿ ನಿಲ್ಲಿಸಿದ್ದ 2,82,000 ರೂ. ಮೌಲ್ಯದ ತ್ರಿಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ಜುವಾಮ್ ಗೋವಿಯಸ್ ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.