ಅಂಚೆ ಕಚೇರಿಯಲ್ಲಿ Ramp, ಪ್ರತ್ಯೇಕ ಕೌಂಟರ್ ಅಗತ್ಯ | ಪುತ್ತೂರು ಅಂಚೆ ಕಚೇರಿಗೆ ಅಸಹಾಯಕರ ಸೇವಾ ಟ್ರಸ್ಟ್ ನಿಂದ ಮನವಿ

ಪುತ್ತೂರು: ಸರಕಾರದ ನಿಯಮದಂತೆ ಪಾನ್ ಕಾರ್ಡ್, ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಜೋಡಿಸಬೇಕಾದ ಅನಿವಾರ್ಯತೆ ಇದ್ದು, ಈ ಎಲ್ಲಾ ಕೆಲಸ ಕಾರ್ಯಗಳಿಗೆ ಅಂಚೆ ಕಚೇರಿಗೆ ಬರುವ ವಿಕಲಚೇತನ, ವಿಶೇಷ ಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಕಡ್ಡಾಯವಾಗಿ ಇರಲೇಬೇಕಾದ Ramp ವ್ಯವಸ್ಥೆ ಪುತ್ತೂರು ಅಂಚೆ ಕಚೇರಿಗೆ ಇರುವುದಿಲ್ಲ ಇದರಿಂದ ಅನನುಕೂಲವಾಗುತ್ತಿದ್ದು, ತಕ್ಷಣ Ramp ವ್ಯವಸ್ಥೆಯನ್ನು ಮಾಡುವಂತೆ ಅಸಹಾಯಕರ ಸೇವಾ ಟ್ರಸ್ಟ್ ಅಂಚೆ ಕಚೇರಿಗೆ ಮನವಿ ಮಾಡಿದೆ.

ಕಳೆದ 15 ವರ್ಷಗಳಿಂದ ಅಸಹಾಯಕರ ಸೇವಾ ಟ್ರಸ್ಟ್ ನಿರಂತರವಾಗಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಅಸಹಾಯಕರು, ವಿಕಲಚೇತನರು, ವಿಶೇಷ ಚೇತನರ ಮುಂತಾದವರ ಅವಶ್ಯಕತೆಗಳಿಗೆ ಸ್ಪಂದಿಸಿ ಅವರ ಹಕ್ಕುಗಳ ಕುರಿತಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೋರಾಟ ಮಾಡುತ್ತಾ ಬಂದಿದೆ. ಆದ್ದರಿಂದ ದಿನನಿತ್ಯದ ಕೆಲವೊಂದು ಕೆಲಸ ಕಾರ್ಯಗಳಿಗೆ ಅಂಚೆ ಕಚೇರಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ಇರಲೇಬೇಕಾದ Ramp ವ್ಯವಸ್ಥೆ ಮಾಡುವಂತೆ ಟ್ರಸ್ಟ್ ಮನವಿ ಮಾಡಿದೆ.

ಇದಲ್ಲದೆ ಕಚೇರಿಗೆ ಬರುವ ವಿಕಲಚೇತನ, ವಿಶೇಷ ಚೇತನ, ಅಂಗವಿಕಲರಿಗೆ ಕಚೇರಿಯ ಒಳಗಡೆ ಪ್ರತ್ಯೇಕ ವ್ಯವಸ್ಥೆ ಇರುವುದಿಲ್ಲ. ಅವರು ಕೂಡಾ ಸಾರ್ವಜನಿಕರೊಂದಿಗೆ ಟೋಕನ್ ಪಡೆದು ನಿಂತು ತಮ್ಮ ಸೌಲಭ್ಯವನ್ನು ಪಡೆದುಕೊಳ್ಳಬೇಕಾದ ಕಷ್ಟಕರ ಪರಿಸ್ಥಿತಿ ಇದೆ. ಆದ್ದರಿಂದ ಪ್ರತ್ಯೇಕ ಕೌಂಟರ್ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಟ್ರಸ್ಟ್ ಮನವಿಯಲ್ಲಿ ಒತ್ತಾಯಿಸಿದೆ.  ಇದು ಅತ್ಯಂತ ತುರ್ತಿನ ಕೆಲಸ ಆಗಿರುವುದರಿಂದ  ತಾತ್ಕಾಲಿಕವಾಗಿಯಾದರೂ ಅಂಚೆ ಕಚೇರಿಯ ಕೆಳ ಅಂತಸ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೆಕಂದು ಟ್ರಸ್ಟ್ ಒತ್ತಾಯಿಸಿ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top