ಪುತ್ತೂರು: ಹನುಮಗಿರಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಏ.4 ರಿಂದ 6 ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಏ.4 ರಂದು ಮಧ್ಯಾಹ್ನ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಉಗ್ರಾಣ ತುಂಬಿಸುವುದು, ರಾತ್ರಿ ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ, ಪವಮಾನ ರಥೋತ್ಸವ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಏ.5 ರಂದು ಬೆಳಿಗ್ಗೆ ನಾಗತಂಬಿಲ, ಗಣಪತಿ ಹೋಮ, ಮಧ್ಯಾಹ್ನ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ ತಾಯಂಬಕ ಸೇವೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಬೆಡಿ ಸೇವೆ, ಕಟ್ಟೆಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯುವುದು.
ಏ.6 ರಂದು ಬೆಳಿಗ್ಗೆ ಹನುಮ ಜಯಂತಿ ಸಂಭ್ರಮ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.6 ರಂದು ಸಂಜೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ ಚೂಡಾಮಣಿ-ಇಂದ್ರಜಿತು-ಮಹಿರಾವಣ” ಯಕ್ಷಗಾಣ ಬಯಲಾಟ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.