ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯ ಸದಸ್ಯರ ಪ್ರತಿಭಟನೆ

ಕರಾಚಿ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಹಲವರು ದೇಶದಲ್ಲಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆಯ ಬಗ್ಗೆ ಗಮನ ಸೆಳೆಯಲು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ಗುರುವಾರ ನಡೆದ ಪ್ರತಿಭಟನೆಯನ್ನು ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ (ಪಿಡಿಐ) ಆಯೋಜಿಸಿತ್ತು.
ಸಿಂಧಿ ಹಿಂದೂಗಳು ಎದುರಿಸುತ್ತಿರುವ ಈ ದೊಡ್ಡ ಸಮಸ್ಯೆಯನ್ನು ನಾವು ಹೈಲೈಟ್ ಮಾಡಲು ಬಯಸಿದ್ದೇವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಯುವತಿಯರನ್ನು, 12 ಮತ್ತು 13 ವರ್ಷ ವಯಸ್ಸಿನ ಕೆಲವರನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ ಮತ್ತು ನಂತರ ವಯಸ್ಸಾದ ಮುಸ್ಲಿಂ ಪುರುಷರೊಂದಿಗೆ ಮದುವೆ ಮಾಡಲಾಗುತ್ತಿದೆ ಎಂದು ಪಿಡಿಐ ಸದಸ್ಯರೊಬ್ಬರು ಹೇಳಿದರು.

ಪ್ರತಿಭಟನಾಕಾರರು ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರದ ವಿರುದ್ಧ ಸ್ಥಗಿತಗೊಂಡಿರುವ ಮಸೂದೆಯನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದುಕೊಂಡಿದ್ದರು. ಇವರಿಂದ ದೂರದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ನಿಂತಿದ್ದರಿಂದ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.
ಇತ್ತೀಚಿನ ತಿಂಗಳುಗಳಲ್ಲಿ ಸಿಂಧ್‌ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಂಡಿವೆ. ಈ ಸಂಬಂಧ ಕೆಳ ನ್ಯಾಯಾಲಯಗಳಲ್ಲಿ, ನ್ಯಾಯಕ್ಕಾಗಿ ಮತ್ತು ಅವರ ಹೆಣ್ಣುಮಕ್ಕಳು, ಸಹೋದರಿಯರು ಮತ್ತು ಹೆಂಡತಿಯರನ್ನು ಹಿಂದಿರುಗಿಸಲು ಪೋಷಕರಿಂದ ಅರ್ಜಿಗಳಿಂದ ತುಂಬಿವೆ.
ದುರದೃಷ್ಟವಶಾತ್, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮನವಿಯನ್ನು ಆಲಿಸಲು ಪ್ರಾಂತೀಯ ಸರ್ಕಾರದ ಯಾವುದೇ ಪ್ರತಿನಿಧಿಗಳು ಬರಲಿಲ್ಲ.































 
 

2019ರಲ್ಲಿ, ಸಿಂಧ್ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಹುಡುಗಿಯರ ಅಪಹರಣ ಮತ್ತು ಬಲವಂತದ ಮತಾಂತರದ ವಿರುದ್ಧ ಮಸೂದೆಯನ್ನು ಸಿಂಧ್ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು. ಇದನ್ನು ಕೇವಲ ಹಿಂದೂ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತಗೊಳಿಸಬಾರದು ಎಂಬ ಕೆಲವು ಶಾಸಕರ ಆಕ್ಷೇಪಗಳ ಮೇಲೆ ಅದನ್ನು ಮಾರ್ಪಡಿಸಿದ ನಂತರ ನಿರ್ಣಯವನ್ನು ಚರ್ಚಿಸಲಾಯಿತು ಮತ್ತು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಆದರೆ, ಬಲವಂತದ ಧಾರ್ಮಿಕ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ನಂತರ ವಿಧಾನಸಭೆಯಲ್ಲಿ ತಿರಸ್ಕರಿಸಲಾಯಿತು. ಇದೇ ರೀತಿಯ ಮಸೂದೆಯನ್ನು ಮತ್ತೆ ಪ್ರಸ್ತಾಪಿಸಲಾಯಿತು. ಆದರೆ, ಅದು 2021ರಲ್ಲಿ ತಿರಸ್ಕರಿಸಲ್ಪಟ್ಟಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top