ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಧರ್ಮಸ್ಥಳ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಜನಜಾಗೃತಿ ಸಭೆಯಲ್ಲಿ ನಡೆಸಲಾಯಿತು.
ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಲೋಕೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿಯಾಗಿ ಪ್ರವೀಣ್ ಚಂದ್ರ ಆಳ್ವ ಆಯ್ಕೆಯಾದರು.
ಉಪ್ಪಿನಂಗಡಿ ವಲಯಾಧ್ಯಕ್ಷರುಗಳಾಗಿ ಲೋಕೇಶ್ ಬೆತ್ತೋಡಿ, ಕುಂಬ್ರ ವಲಯಾಧ್ಯಕ್ಷರಾಗಿ ಪ್ರಕಾಶ್ಚಂದ್ರ ಕೈಕಾರ, ಕೆದಂಬಾಡಿ ವಲಯಾಧ್ಯಕ್ಷರಾಗಿ ಶ್ಯಾಮ್ ಸುಂದರ್ ರೈ, ಬೆಟ್ಟಂಪಾಡಿ ವಲಯಾಧ್ಯಕ್ಷರಾಗಿ ರವಿ ಕಟೀಲ್ತಡ್ಕ, ಬನ್ನೂರು ವಲಯಾಧ್ಯಕ್ಷರಾಗಿ ರಾಮಣ್ಣ ಗೌಡ ಗುಂಡೋಲೆ, ಪುತ್ತೂರು ವಲಯಾಧ್ಯಕ್ಷರಾಗಿ ಸತೀಶ್ ನಾಯ್ಕ್, ಅರಿಯಡ್ಕ ವಲಯಾಧ್ಯಕ್ಷರಾಗಿ ವಿಕ್ರಮ್ ರೈ ರೈ ಸಾಂತ್ಯ ಆಯ್ಕೆಯಾಗಿದ್ದಾರೆ.