ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ

ಆಪ್ತ ಸಲಹೆಗಾರರೆ ರಾಹುಲ್‌ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದ ಬಿಜೆಪಿ ನಾಯಕ

ಬೆಂಗಳೂರು : ರಾಹುಲ್‌ ಗಾಂಧಿಯ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಡಿದ ಆರೋಪ ಸಂಚಲನವುಂಟು ಮಾಡಿದೆ. ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಲೆಹರ್‌ ಸಿಂಗ್‌ ಸಿರೋಯಾ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಹರಕೆಯ ಕುರಿಯಂತೆ ಬಲಿಕೊಡಲು ಮುಂದಾಗಿದೆ ಎಂಬುದು ಸಿರೋಯ ಹೇಳಿದ್ದಾರೆ.

ರಾಹುಲ್‌ ಗಾಂಧಿ ಶುದ್ಧ ಹ್ರದಯದ ವ್ಯಕ್ತಿ, ಆದರೆ ಅವರನ್ನು ದುರ್ಬಲಗೊಳಿಸುವ ಷಡ್ಯಂತ್ರವನ್ನು ಕಾಂಗ್ರೆಸ್‌ನ ಗುಂಪೊಂದು ಹೆಣೆಯುತ್ತಿದೆ ಎಂದು ಸಿರೋಯ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರನ್ನು ದುರ್ಬಲಗೊಳಿಸಲು, ದಾರಿತಪ್ಪಿಸಲು ಮತ್ತು ಹರಕೆಯ ಕುರಿ ಮಾಡಲು ಕಾಂಗ್ರೆಸ್‌ನಲ್ಲಿ ಷಡ್ಯಂತ್ರ ನಡೆಯುತ್ತಿದೆ.































 
 

ರಾಹುಲ್‌ ಗಾಂಧಿಯವರ ಸಲಹೆಗಾರರು ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಆಪ್ತ ಸಲಹೆಗಾರರೇ ರಾಹುಲ್‌ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ. ರಾಹುಲ್ ಗಾಂಧಿಗೆ ಸಲಹೆ ನೀಡುತ್ತಿರುವ ಜನರ ಕುತಂತ್ರಗಳನ್ನು ಕಂಡಾಗ ನನಗೆ ಆಶ್ಚರ್ಯವಾಗುತ್ತದೆ. ಅವರ ಸುತ್ತಮುತ್ತಲಿನ ಜನರನ್ನು ನೋಡಿದಾಗ, ನನಗೆ ಅರ್ಥವಾಗುವುದು ರಾಹುಲ್ ಗಾಂಧಿ ಓರ್ವ ಶುದ್ಧ ಹೃದಯದ ವ್ಯಕ್ತಿ. ಅವರ ಸಲಹೆಗಾರರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿರೋಯಾ ಹೇಳಿದ್ದಾರೆ.
ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕೆಟ್ಟದಾಗಿ ವರ್ತಿಸುತ್ತಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ವಾಸ್ತವವಾಗಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾಗಿ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧರಾಗಿ ಬರಲಿ ಎಂದು ನಾವು ಹಾರೈಸುತ್ತೇವೆ. ಆದರೆ ರಾಹುಲ್‌ ತಮ್ಮನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿರುವ ತಮ್ಮ ಆಪ್ತ ಸಲಹೆಗಾರರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿ ನಾಯಕ ಸಲಹೆ ನೀಡಿದ್ದಾರೆ.

ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿ ತಮ್ಮ ಸಂಸತ್‌ ಸದಸ್ಯತ್ವವನ್ನು ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್‌ ತೀರ್ಪಿನ ವಿರುದ್ಧ ತಕ್ಷಣವೇ ಮೇಲ್ಮನವಿ ಸಲ್ಲಿಸಿದ್ದರು. ರಾಹುಲ್‌ ಕೂಡ ಇದೇ ರೀತಿ ಮಾಡಲಿದ್ದಾರೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ರಾಹುಲ್ ಗಾಂಧಿ ಅವರು ಸ್ವಂತ ಮನೆ ಇರದಿದ್ದರೂ ಸರ್ಕಾರದ ಆದೇಶದಂತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ಇದನ್ನೆಲ್ಲಾ ಏಕೆ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. 1977ರಲ್ಲಿ ಸೋತ ಬಳಿಕ ಇಂದಿರಾ ಗಾಂಧಿ 1978ರಲ್ಲಿ ಆಗಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರ ಬಳಿ ವಸತಿ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಇಂದಿರಾ ಅವರ ಕೋರಿಕೆಯನ್ನು ಮನ್ನಿಸಿದ ಮೊರಾರ್ಜಿ ದೇಸಾಯಿ 12 ವಿಲ್ಲಿಂಗ್‌ಡನ್ ಕ್ರೆಸೆಂಟ್‌ನಲ್ಲಿ ಇಂದಿರಾ ಅವರಿಗೆ ಸರ್ಕಾರಿ ಬಂಗಲೆಯನ್ನು ನೀಡಿದರು. ರಾಹುಲ್‌ ಕೂಡ ಇಂತಹ ಪ್ರಯತ್ನಗಳನ್ನು ಮಾಡಬಹುದು ಎಂದು ಸಿರೋಯಾ ಸಲಹೆ ನೀಡಿದ್ದಾರೆ.

ಮಾಜಿ ಸಂಸದರಾಗಿ ರಾಹುಲ್ ಗಾಂಧಿ ಬೇರೆ ಮಾರ್ಗಗಳನ್ನು ಅನ್ವೇಷಿಸಬಹುದಿತ್ತು. ಆದರೆ ಅವರ ಆಪ್ತ ಸಲಹೆಗಾರರು ಅವರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ನ ಜಿ-23 ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು, ಅನೇಕ ಹಿರಿಯ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಈಗಿರುವ ನಾಯಕರು ರಾಹುಲ್‌ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ಬಯಸಿದ್ದಾರೆ ಎಂದು ಲೆಹರ್‌ ಸಿಂಗ್‌ ಸಿರೋಯಾ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top