ಲಿಂಕ್ ಕಳುಹಿಸಿ ಹಣ ಎಗರಿಸಿದ ಖದೀಮ
ಉಡುಪಿ : ಆನ್ಲೈನ್ನಲ್ಲಿ ಫೇಸ್ಕ್ರೀಂ ಬಗ್ಗೆ ಮಾಹಿತಿ ಹುಡುಕಲು ಹೋದ ಮಹಿಳೆಯೊಬ್ಬರು ಸುಮಾರು 2 ಲ.ರೂ. ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಜ್ಯೋತಿ (32) ಹಣ ಕಳೆದುಕೊಂಡವರು. ಫೇಸ್ಕ್ರೀಂ ಬಗ್ಗೆ ಆನ್ಲೈನ್ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ದೊರೆತ ನಂಬರ್ಗೆ ಕರೆ ಮಾಡಿದ್ದು, ಆಗ ವ್ಯಕ್ತಿಯೊಬ್ಬ ನೋಂದಣಿ ಮಾಡುವಂತೆ ಸೂಚಿಸಿದ್ದಾನೆ. ಮಾ.22 ರಂದು ಮತ್ತೆ ಕರೆ ಮಾಡಿದ ವ್ಯಕ್ತಿ ಈ ಹಿಂದೆ ಮಾಡಿದ ಮಾಹಿತಿ ತಪ್ಪಾಗಿದೆ ಎಂದು ತಿಳಿಸಿದ್ದ ಅಲ್ಲದೆ ಬೇರೊಂದು ಲಿಂಕ್ ಕಳುಹಿಸಿ ಅದರಲ್ಲಿ ವಿವರ ನೀಡುವಂತೆ ಸೂಚಿಸಿದ್ದ. ಅದನ್ನು ನಂಬಿದ ಮಹಿಳೆ ವಿವಿರ ಅಪ್ಡೇಟ್ ಮಾಡಿದ್ದರು. ಮಾ.24ರಂದು 99,999 ರೂ. ಮಾ.25ರಂದು 90,000 ಸಾವಿರ ರೂ. ಮತ್ತೊಮ್ಮೆ 8,000 ಸಾವಿರ ರೂ. ಸೇರಿದಂತೆ ಒಟ್ಟು 1,97,999 ರೂ. ಅವರ ಬ್ಯಾಂಕ್ ಖಾತೆಯಿಂದ ಆತ ಎಗರಿಸಿದ್ದಾನೆ.