ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಆಡಳಿತ ಮಂಡಳಿಗೆ ಮಾ.26 ರಂದು ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಲೋಕಯ್ಯ ಗೌಡರ ನೇತೃತ್ವದ ತಂಡ ಒಂದು ಸ್ಥಾನದ ಮೂಲಕ ಬಹುಮತ ಪಡೆದಿದೆ.
ಎದುರಾಳಿ ತಂಡದ ನಾಯಕತ್ವ ವಹಿಸಿದ್ದ ಕಿರಣ್ ಬುಡ್ಲೆಗುತ್ತು ಅತಿಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಅವರ ತಂಡ 10 ಸ್ಥಾನಗಳನ್ನು ಪಡೆದುಕೊಂಡಿದೆ. ಲೋಕಯ್ಯ ಗೌಡರ ತಂಡ 11 ಸ್ಥಾನಗಳನ್ನು ಗೆದ್ದುಕೊಂಡಿದೆ.
ಸಂಘದ ಒಟ್ಟು 21 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಲೋಕಯ್ಯ ಗೌಡರ ನೇತೃತ್ವದಲ್ಲಿ 21 ಮಂದಿ ಹಾಗೂ ಕಿರಣ್ ಬುಡ್ಲೆಗುತ್ತು ನೇತೃತ್ವದಲ್ಲಿ 21 ಮಂದಿ ಸ್ಪರ್ಧಿಸಿದ್ದರು. ಮಾ.26 ರಂದು ಮಂಗಳೂರಿನ ಗಣಪತಿ ಹೈಸ್ಕೂಲ್ ನಲ್ಲಿ ಚುನಾವಣೆ ನಡೆಯಿತು. ಲೋಕಯ್ಯ ಗೌಡರ ತಂಡದಲ್ಲಿ ಸ್ಪರ್ಧಿಸಿದ್ದವರಲ್ಲಿ ಲೋಕಯ್ಯ ಗೌಡ, ಡಾ.ದಾಮೋದರ ನಾರಾಲು, ಪದ್ಮನಾಭ ದೇವಸ್ಯ, ಗುರುದೇವ ಯು.ಬಿ., ರಾಮಚಂದ್ರ ಕೆ., ಡಾ.ಪುರುಷೋತ್ತಮ ಕೆ.ವಿ., ಗಿರೀಶ್ ಎಚ್.ಎಂ., ಪದ್ಮನಾಭ ಅತ್ಯಾಡಿ, ಬಾಲಕೃಷ್ಣ ಗೌಡ ಬಿ., ಸಂದೀಪ್ ನೀರಬಿದಿರೆ ಹಾಗೂ ಸೌಮ್ಯ ಸುಕುಮಾರ್ ಜಯಗಳಿಸಿದ್ದಾರೆ.
ಕಿರಣ್ ಬುಡ್ಲೆಗುತ್ತು ನೇತೃತ್ವದಲ್ಲಿ ಸ್ಪರ್ಧಿಸಿದ್ದ ತಂಡದಲ್ಲಿದ್ದ ಕಿರಣ್ ಬಡ್ಲೆಗುತ್ತು, ರಕ್ಷಿತ್, ನವೀನ್ ಚಿಲ್ಪಾರು, ಪಡ್ಡಂಬೈಲು ಕೃಷ್ಣಪ್ಪ ಗೌಡ, ಡಿ.ಬಿ.ಬಾಲಕೃಷ್ಣ, ನವೀನ್ ಚಂದ್ರ ಬೋಜಾರ, ಜಯಶ್ರೀ ಸುಜಯ್, ಪೂರ್ಣಿಮಾ ಕೆ.ಎಂ., ಇಂದ್ರಾವತಿ, ಕಲಾವತಿ ಜಯಗಳಿಸಿದ್ದಾರೆ.