ಪುತ್ತೂರು : ನರಿಮೊಗರು ಗ್ರಾಮದ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ವೇ.ಮೂ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿ ಹಾಗೂ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 5 ರಿಂದ 108 ಕಾಯಿ ಮಹಾಗಣಪತಿ ಹೋಮ, 6.32 ರಿಂದ 7.10 ರ ವರೆಗಿನ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 10.30 ಕ್ಕೆ ದಾನಿಗಳಿಂದ ನೀಡಲಾದ ಪುಷ್ಪರಥ ಎಡನೀರು ಶ್ರೀ ಸಚ್ಚಿದಾನಂದ ಶ್ರೀಪಾದಂಗಳವರಿಂದ ದಿವ್ಯಹಸ್ತದಿಂದ ಶ್ರೀ ದೇವಸ್ಥಾನಕ್ಕೆ ಸಮರ್ಪಣೆಯಾಯಿತು. ಬಳಿಕ ಮಧ್ಯಾಹ್ನ 12 ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಸಂಜೆ 6.30 ರಿಂದ ಮಹಾಪೂಜೆ, ಶ್ರೀ ದೇಬರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ಪುಷ್ಪ ರಥೋತ್ಸವ, ವಸಂತಕಟ್ಟೆ ಪೂಜೆ ಜರಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಗೌರವ ಸಲಹೆಗಾರ ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷ ಲಕ್ಷ್ಮೀ ತಂತ್ರಿ ಉಪ್ಪಳ, ಉಪಾಧ್ಯಕ್ಷ ಕೆ.ಎಂ.ಬೆಳಿಯಪ್ಪ ಗೌಡ ಕೆದ್ಕಾರ್, ಕಾರ್ಯದರ್ಶಿ ಎಂ.ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ, ಸದಸ್ಯರಾದ ಸುಜಯ್ ತಂತ್ರಿ ಉಪ್ಪಳ, ಪ್ರಸನ್ನ ಭಟ್ ಪಂಚವಟಿ, ಕೆ.ಗಿರೀಶ್ ರೈ ಮಣಿಯ, ಯಂ.ರವಿ ಮಣಿಯ, ಎಂ.ಸುಧೀರ್ ಹೆಬ್ಬಾರ್ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಅರ್ಚಕ ಪ್ರಸಾದ ಅಡಿಗ, ಭಕ್ತಾದಿಗಳು ಉಪಸ್ಥಿತರಿದ್ದರು.