ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮನವಮಿ ಉತ್ಸವ, ಸಾರ್ವಜನಿಕ ನವಗ್ರಹ ಯಾಗ

ಪುತ್ತೂರು: ನಗರದ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮನವಮಿ ಉತ್ಸವ ಹಾಗೂ ಸಾರ್ವಜನಿಕ ನವಗ್ರಹ ಯಾಗ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಉತ್ಸವದ ಅಂಗವಾಗಿ ಮಠದ ಪ್ರಧಾನ ಅರ್ಚಕ ಎ.ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಬೆಳಿಗ್ಗೆ 8 ರಿಂದ ಪುಣ್ಯಾಹ ವಾಚನ, ಗ್ರಹಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ಮಠದ ಟ್ರಸ್ಟಿಗಳಾದ ಯನ್. ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಲೋಕೇಶ್ ಹೆಗ್ಡೆ, ಗಣಪತಿ ನಾಯಕ್, ಕಾರ್ಯದರ್ಶಿ ಯು.ಪೂವಪ್ಪ, ಭಕ್ತಾದಿಗಳು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top