110 ಕೆ.ವಿ. ಸಬ್ ಸ್ಟೇಷನಿಗಾಗಿ ಕರ್ವೇಲಿನಲ್ಲಿ 3.26 ಎಕ್ರೆ ಜಮೀನು ಮಂಜೂರು | ಪ್ರಸ್ತಾವನೆ ಸಲ್ಲಿಸಿದ್ದ ಶಾಸಕ ಸಂಜೀವ ಮಠಂದೂರು | 1.04 ಕೋಟಿ ರೂ. ಪಾವತಿಸಿದ ಕೆ.ಪಿ.ಟಿ.ಸಿ.ಎಲ್

ಪುತ್ತೂರು: ಮೆಸ್ಕಾಂ ಸಬ್ ಸ್ಟೇಷನ್ ಗೆ ಕರ್ವೇಲಿನಲ್ಲಿ 3.26 ಎಕರೆ ಜಾಗ ಮಂಜೂರಾಗಿದ್ದು, ಸರಾಗ ವಿದ್ಯುತ್ ಪೂರೈಕೆಗೆ ಇದು ಪೂರಕವಾಗಲಿದೆ.

ಉಪ್ಪಿನಂಗಡಿ ಭಾಗದ ಜನರ ಬಹುಕಾಲದ ಬೇಡಿಕೆ 110/11 ಕೆ.ವಿ. ಸಬ್ ಸ್ಟೇಷನ್ ನೆಕ್ಕಿಲಾಡಿ ಭಾಗದಲ್ಲಿ ಆಗಬೇಕು. ಪುತ್ತೂರಿನ ಬನ್ನೂರಿನಲ್ಲಿ 110 ಕೆ.ವಿ. ಸಬ್ ಸ್ಟೇಷನ್ ಹಾಗೂ 33 ಕೆ.ವಿ. ಸಬ್ ಸ್ಟೇಷನ್ ಕಾರ್ಯಚರಿಸುತ್ತಿದೆ. ಆದರೂ ವಿದ್ಯುತ್ ಸಮಸ್ಯೆ ದೂರವಾಗಿಲ್ಲ. ಆದ್ದರಿಂದ ಉಪ್ಪಿನಂಗಡಿಯಲ್ಲಿ 110 ಕೆ.ವಿ. ಸಬ್ ಸ್ಟೇಷನಿಗೆ ಶಾಸಕ ಸಂಜೀವ ಮಠಂದೂರು ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಈ ಪ್ರಸ್ತಾವನೆಯ ಭಾಗವಾಗಿ ಕರ್ವೇಲಿನಲ್ಲಿ 3.26 ಎಕರೆ ಜಾಗ ಮಂಜೂರಾಗಿದ್ದು, ನಿಗಮಕ್ಕೆ ಸ್ವಾಧೀನ ಮಾಡಲು ಅನುಮೋದನೆ ನೀಡಲಾಗಿದೆ.

1.04 ಕೋಟಿ ರೂ. ಪಾವತಿ:



































 
 

ಕರ್ವೇಲಿನಲ್ಲಿ ಕಾದಿರಿಸಿದ ಜಮೀನಿನ ಮೌಲ್ಯ 1,04,97,899 ರೂ. ಈ ಮೊತ್ತವನ್ನು ಪಾವತಿಸುವಂತೆ ಕೆಪಿಟಿಸಿಎಲ್ ಗೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮೊತ್ತವನ್ನು ಪಾವತಿಸಲಾಗಿದೆ.

ಜಿಲ್ಲಾಧಿಕಾರಿ ತಿಳಿಸಿರುವಂತೆ, ಸ್ಥಳದ ಮೌಲ್ಯ, ಭೂ ಪರಿವರ್ತನಾ ಶುಲ್ಕ, ಅಳತೆ ಶುಲ್ಕ ಸೇರಿ ಒಟ್ಟು 1.04 ಕೋಟಿ ರೂ. ಪಾವತಿಸಿ ಚಲನ್ ಅನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಜರುಪಡಿಸಲು ತಿಳಿಸಿದೆ. ಹಂಚಿಕೆ ಮಾಡಿರುವ ಜಮೀನನ್ನು ನಿಗಮದ ಸ್ವಾಮ್ಯಕ್ಕೆ ತಕ್ಷಣ ಪಡೆದು, ಜಮೀನಿನ ಸಂರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮ ನಿಗಮದ ನಿಯಮಾನುಸಾರ ಕೈಗೊಳ್ಳಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಂಬಂಧಿಸಿದ ಕಚೇರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top