ಪುತ್ತೂರು: ಪುತ್ತೂರಿನ ಜನತೆಯ ಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜಿಗೆ ಪೂರಕವಾದ ವ್ಯವಸ್ಥೆಯನ್ನು ಜೋಡಿಸಿರುವುದು ಭಾರತೀಯ ಜನತಾ ಪಾರ್ಟಿ. ಕಾಲೇಜು ನಿರ್ಮಾಣದ ಚಿಂತನೆಯ ಹಿಂದೆ ಪುತ್ತೂರು ಶಾಸಕರ ಪಾತ್ರ ಮಹತ್ತರವಾಗಿದೆ ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದ ಆರ್.ಸಿ. ನಾರಾಯಣ ಹೇಳಿದರು.
ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ನಿರ್ಮಾಣಕ್ಕೆ ಏನೆಲ್ಲಾ ಪೂರ್ವ ತಯಾರಿ ಬೇಕಾಗಿದೆ ಅದನ್ನು ಈಗಾಗಲೇ ಶಾಸಕರ ನೇತೃತ್ವದಲ್ಲಿ ಮಾಡಲಾಗಿದೆ. ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ 5.1 ಎಕ್ರೆ ವಿಸ್ತೀರ್ಣ ಹೊಂದಿದ್ದು, ಪಕ್ಕದ ಸಬ್ ರಿಜಿಸ್ಟ್ರಾರ್ ಕಚೇರಿ ಜಾಗ, ಲೋಕೋಪಯೋಗಿ ಇಲಾಖೆ ಜಾಗದ ಸೇರಿದಂತೆ ಸರಕಾರಿ ಆಸ್ಪತ್ರೆಗೆ ಶಾಸಕರ ನೇತೃತ್ವದಲ್ಲಿ ಮೀಸಲಿಡಲಾಗಿದೆ. ಮುಂದೆ 300 ಬೆಡ್ ಆಸ್ಪತ್ರೆಯಾಗಿ ಶೀಘ್ರ ಮೇಲ್ದರ್ಜೆಗೇರಲು ಪೂರ್ವ ತಯಾರಿ ನಡೆಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ 12 ಡಯಾಲಿಸಿಸ್ ನ್ನು ಶಾಸಕರು ಒದಗಿಸಿದ್ದಾರೆ ಎಂದು ವಿವರಿಸಿದರು.
ಉಪ್ಪಿನಂಗಡಿ, ವಿಟ್ಲ ಪಾಣಾಜೆಗೆ ಸಮುದಾಯ ಆರೋಗ್ಯ ಕೇಂದ್ರವನ್ನು ತರುವಲ್ಲಿ ಸಫಲರಾಗಿದ್ದು, ಈಗಾಗಲೇ ಪಾಣಾಜೆಯಲ್ಲಿ 12.4 ಕೋಟಿ ವೆಚ್ಚದ ವಿಸ್ತೃತ ಕಟ್ಟಡ ನಿರ್ಮಾಣ ಆಗಲಿದೆ. ಉಪ್ಪಿನಂಗಡಿ ಆರೋಗ್ಯ ಸಮುದಾಯ ಕೇಂದ್ರಕ್ಕೆ 75 ಲಕ್ಷ ರೂ., ವಿಟ್ಲಕ್ಕೆ 47 ಲಕ್ಷ ರೂ. ಅನುದಾನ ಇಡಲಾಗಿದೆ. ಅಲ್ಲದೆ ವಿವಿಧೆಡೆ ಆರೋಗ್ಯ ಕೇಂದ್ರಗಳಿಗೆ ಸ್ವಚ್ಛತೆ ಇನ್ನಿತರ ಸೇರಿದಂತೆ ಅಭಿವೃದ್ಧಿಗೆ 17 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದ ಅವರು, ಒಟ್ಟಾರೆಯಾಗಿ ನೂರಕ್ಕೆ ನೂರು ಶೇಕಡಾ ಪುತ್ತೂರು ಆಸ್ಪತ್ರೆಯನ್ನು ಸುಸಜ್ಜಿತವಾಗಿರಿಸಿದ್ದು ಮಂಗಳೂರು ವೆನ್ಲಾಕ್ ಆಸ್ಪತ್ರೆಯನ್ನು ಬಿಟ್ಟರೆ ಪುತ್ತೂರಿನ ಆಸ್ಪತ್ರೆ ಎಂದು ಅವರು ಹೇಳಿದರು.
50 ವರ್ಷಗಳ ಅಭಿವೃದ್ಧಿಯ ಕಲ್ಪನೆ:
ಮುಂದಿನ 50 ವರ್ಷಗಳ ಅಭಿವೃದ್ಧಿಗೆ ಪೂರಕವಾಗಿ ಆರೋಗ್ಯ ಕಲ್ಪನೆ ಬಿಜೆಪಿಯದ್ದು. ಶಾಸಕರು ಎಲ್ಲಾ ಆಲೋಚನೆಗಳು ಅಭಿವೃದ್ಧಿ ಕೆಲಸಕ್ಕೆ ಪೂರವಾಗಿದೆ ಎಂದು ಆರ್.ಸಿ. ನಾರಾಯಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ಬನ್ನೂರು, ಚಂದ್ರಶೇಖರ ಬಪ್ಪಳಿಗೆ ಉಪಸ್ಥಿತರಿದ್ದರು.