ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಜನಜಾಗೃತಿ ಸಭೆ ಪುತ್ತೂರು ಧರ್ಮಸ್ಥಳ ಸಭಾಭವನದಲಿ ನಡೆಯಿತು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮಾಜಿ ಜಿಲ್ಲಾ ಜನಜಾಗೃತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಉದ್ಘಾಟಿಸಿದರು ಜನ ಜಾಗೃತಿ ಕಾರ‍್ಯಕ್ರಮದ ವಾರ್ಷಿಕ ವರದಿಯನ್ನು ತಾಲೂಕು ಯೋಜನಾಧಿಕಾರಿ ಆನಂದ ಕೆ. ಮಂಡಿಸಿದರು. ನಂತರ ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಜನ ಜಾಗೃತಿ ಕರ‍್ಯಕ್ರಮದ ಬಗ್ಗೆ ೨೦೨೩-೨೪ ಸಾಲಿನ ಕಾರ‍್ಯಕ್ರಮದ ಕ್ರಿಯಾಯೋಜನೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ನೂತನ ತಾಲೂಕು ಜನಜಾಗೃತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಲೋಕೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿಯಾಗಿ ಪ್ರವೀಣ್‌ಚಂದ್ರ ಆಳ್ವ ಆಯ್ಕೆಯಾದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರನ್ನು ಗೌರವಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಲಯ ಜನಜಾಗೃತಿ ಅಧ್ಯಕ್ಷರನ್ನು ಗೌರವಿಸಿದರು. ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ವಲಯದ ಎಲ್ಲಾ ಮೇಲ್ವಿ ್ವ್ವಚಾರಕರು, ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣ ಕಾರ್ಯಕ್ರಮಕ್ಕೆ 2 ಲಕ್ಷ ಮೌಲ್ಯದ ಸಲಕರಣೆಯನ್ನು ವಿತರಣೆ ಮಾಡಲಾಯಿತು.