ಪುತ್ತೂರು: ಶ್ರೀ ಕ್ಷೇತ್ರ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ, ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ನೇಮೋತ್ಸವ, ಸಾಮೂಹಿಕ ನಾಗತಂಬಿಲ ಏ.4 ಹಾಗೂ 5 ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ, ಮುಖ್ಯ ಪರಿಚಾರಕ ಬಾಲಕೃಷ್ಣ ಕೆ. ಗೊನೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜನಾರ್ದನ ಎ.ಹೇಮಳ, ಟ್ರಸ್ಟ್ ಅಧ್ಯಕ್ಷ ನಾರಾಯಣ ಕೋರ್ಜೆ, ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಕೆ., ಶೇಷಪ್ಪ ಗೌಡ, ದಿನೇಶ್ ಎಚ್., ಗಣೇಶ್ ಎ., ಸೀತಾರಾಮ ಹೇಮಳ ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಏ.4 ಮಂಗಳವಾರ ಬೆಳಿಗ್ಗೆ 8 ಕ್ಕೆ ಕವಾಟೋದ್ಘಾಟನೆ, 9 ಕ್ಕೆ ಗಣಹೋಮ, ಕಲಶ ಪೂಜೆ, 10 ಕ್ಕೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, 11 ಕ್ಕೆ ಬ್ರಹ್ಮರ ಮೂಲಸ್ಥಾನದಲ್ಲಿ ಪೂಜೆ, 11.30 ಕ್ಕೆ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಸೇವೆ, ಮಧ್ಯಾಹ್ನ 12.30 ಕ್ಕೆ ನಾಗಬ್ರಹ್ಮ ದೇವರ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ಉಳ್ಳಾಕುಲು ಭಂಡಾರ ಹಿಡಿಯುವುದು, ರಾತ್ರಿ 8 ಕ್ಕೆ ಶ್ರೀ ಉಳ್ಳಾಕುಲು ನೇಮೋತ್ಸವ, 10 ಕ್ಕೆ ಕೈಕಾಣಿಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ.
ಮಾ.5 ಬುಧವಾರ ಬೆಳಿಗ್ಗೆ 8 ಕ್ಕೆ ಬಾಗಿಲು ತೆರೆಯುವುದು, 9 ಕ್ಕೆ ಪಂಚಾಮೃತಾಭಿಷೇಕ, 10 ಕ್ಕೆ ಸಾಮೂಹಿಕ ನಾಗತಂಬಿಲ ಸೇವೆ, 12 ಕ್ಕೆ ಶ್ರೀ ನಾಗಬ್ರಹ್ಮ ದೇವರ ಮಾಹಾಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.