ಪಾನ್ – ಆಧಾರ್ ಲಿಂಕ್ ಆಗಿದೆಯೇ? ಪರಿಶೀಲಿಸಲು ಇಲ್ಲಿದೆ ನೋಡಿ ಲಿಂಕ್ | ಹೀಗೆ ಮಾಡಿ ಆಧಾರ್ – ಪಾನ್ ಕಾರ್ಡ್ ಲಿಂಕ್… | ಪಾನ್- ಆಧಾರ್ ಲಿಂಕ್ ಗಡು ಜೂನ್ 30ರವರೆಗೆ ವಿಸ್ತರಣೆ

ಪುತ್ತೂರು: ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆ ದಿನವನ್ನು ಕೇಂದ್ರ ಸರಕಾರ ವಿಸ್ತರಣೆ ಮಾಡಿದೆ. ಜೂನ್ 30ರವರೆಗೆ ದಿನ ವಿಸ್ತರಿಸಿ ಆದೇಶ ಹೊರಡಿಸಿದ್ದು, ಜುಲೈ 1ರಿಂದ ಕಡ್ಡಾಯ ಎಂದು ತಿಳಿಸಿದೆ.

ನಿಮ್ಮ ಪಾನ್ – ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಆಗಿಲ್ಲವೇ ಎಂದು ಮೊದಲಾಗಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಇಲ್ಲಿ ನೀಡಿರುವ ಲಿಂಕ್ ಅನ್ನು ಬಳಸಿಕೊಳ್ಳಿ. https://eportal.incometax.gov.in/iec/foservices/#/pre-login/link-aadhaar-status ಈ ಲಿಂಕನ್ನು ಪ್ರೆಸ್ ಮಾಡಿದರೆ, ಸಿಗುವ ಪೋರ್ಟಲ್ ನಲ್ಲಿ ಆಧಾರ್ ಹಾಗೂ ಪಾನ್ ಕಾರ್ಡಿನ ನಂಬರ್ ನಮೂದಿಸಿ ಲಿಂಕ್ ಮಾಡಿಕೊಳ್ಳಬಹುದು.

ಎಸ್ಎಂಎಸ್ ಮೂಲಕವೂ ಲಿಂಕ್!



































 
 

ಆಧಾರ್ – ಪಾನ್ ಕಾರ್ಡನ್ನು ಲಿಂಕ್ ಮಾಡುವುದು ಹೇಗೆ ಎನ್ನುವುದು ಹಲವರ ಪ್ರಶ್ನೆ. ಹೆಚ್ಚಿನವರು ಸೈಬರ್ ಸೆಂಟರಿಗೆ ತೆರಳಿ ಆಧಾರ್ – ಪಾನ್ ಲಿಂಕ್ ಮಾಡಿಸಿಕೊಳ್ಳುತ್ತಾರೆ. ಇನ್ನು ಹೆಚ್ಚಿನವರು ತಾವು ಕುಳಿತಲ್ಲಿಯೇ ಆಧಾರ್ – ಪಾನ್ ಲಿಂಕ್ ಮಾಡಿಸಿಕೊಳ್ಳಬಹುದು ಎನ್ನುವುದ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ, ಈ ಕೆಳಗಿನ ಕ್ರಮವನ್ನು ಅನುಸರಿಸಿ, ಮೊಬೈಲ್ ಮೂಲಕವೇ ನಿಮ್ಮ ಆಧಾರ್- ಪಾನ್ ನಂಬರನ್ನು ಲಿಂಕ್ ಮಾಡಿಕೊಳ್ಳಿ.

1) ಮೊದಲು, UIDPAN ಫಾರ್ಮ್ಯಾಟ್ನಲ್ಲಿ ಸಂದೇಶವನ್ನು ಟೈಪ್ ಮಾಡಿ, ಅಂದರೆ, UIDPAN (ಸ್ಪೇಸ್) 12-ಅಂಕಿಯ ಆಧಾರ್ ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಸಂಖ್ಯೆ (ಸ್ಪೇಸ್) 10-ಅಂಕಿಯ PAN ಸಂಖ್ಯೆ.

2) ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ SMS ಕಳುಹಿಸಿ.

3) ಬಳಿಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಕುರಿತು ನೀವು ದೃಢೀಕರಣ ಸಂದೇಶವನ್ನು ಪಡೆಯುವಿರಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top