ಆಧಾರ್- ಪಾನ್ ಲಿಂಕ್ ಆಗದಿದ್ದರೆ ದಂಡ ಬಡವರಿಗೆ ಹೊರೆ | ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಆಧಾರ್ – ಪಾನ್ ಲಿಂಕ್ ಆಗದೇ ಇರುವವರು 1 ಸಾವಿರ ರೂ. ದಂಡ ಪಾವತಿಸಬೇಕು ಎಂಬ ಆದೇಶ ಬಡವರಿಗೆ ಹೊರೆಯಾಗಿ ಪರಿಣಮಿಸಿತ್ತು. ಈ ಸಮಸ್ಯೆಯ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಗಮನ ಸೆಳೆದಿದ್ದಾರೆ.

ಸರಿಯಾದ ಮಾಹಿತಿ ಇರದೇ ಆಧಾರ್ – ಪಾನ್ ಕಾರ್ಡ್ ಲಿಂಕ್ ಮಾಡದೇ ಇರುವ ಬಡವರಿಗೆ ಇನ್ನೊಂದು ಅವಕಾಶ ಮಾಡಿಕೊಡಬೇಕು ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.

ಆಧಾರ್ – ಪಾನ್ ಕಾರ್ಡ್ ಲಿಂಕ್ ಮಾಡಬೇಕೆಂಬ ಆದೇಶವನ್ನು ಈ ಹಿಂದೆಯೇ ನೀಡಲಾಗಿತ್ತು. ಕೊನೆ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು. ಆದರೂ ಆಧಾರ್ – ಪಾನ್ ಕಾರ್ಡ್ ಲಿಂಕ್ ಮಾಡದೇ ಹಲವು ಮಂದಿ ಬಾಕಿಯಾಗಿದ್ದರು. ಇವರಿಗೆ ಇನ್ನೊಂದು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top