ಪುತ್ತೂರು : ಹಂಟ್ಯಾರು ಸರಕಾರಿ ಉನ್ನತ ಹಿರಿಯ ಪ್ರಾರ್ಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕುಡಿಯುವ ನೀರಿನ ಟ್ಯಾಂಕನ್ನು ದಾನಿಗಳ ಮೂಲಕ ಹಸ್ತಾಂತರಿಸಲಾಯಿತು.
ಆರ್ಯಾಪು ಗ್ರಾಮ ಪಂಚಾಯಿತಿ ಸದಸ್ಯರಾದ ಯತೀಶ್ ದೇವ ಮತ್ತು ಹರೀಶ್ ನಾಯಕ್ ಬಳಕ್ಕ ಅವರ ನೇತೃತ್ವದಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿ ಮತ್ತು ದಾನಿಗಳಾದ ಗಣೇಶ್ ರೈ ಮೂಲೆ, ಸೀತಾರಾಮ ರೈ ಕೈಕಾರ ಅವರ ಸಹಕಾರದಿಂದ ಸೋಮವಾರ ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆರ್ಯಾಪು ಪಂಚಾಯಿತಿ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಬು ಮರಿಕೆ, ದಾನಿಗಳಾದ ಸೀತಾರಾಮ ರೈ ಕೈಕಾರ, ಪ್ರಭಾರ ಮುಖ್ಯಶಿಕ್ಷಕಿ ಮೋಹಿನಿ ಜೋಗಿ, ಶಿಕ್ಸಕಿಯರಾದ ವಿದ್ಯಾ, ವತ್ಸಲಾ, ಸಾವಿತ್ರಿ, ಅಡುಗೆ ಸಹಾಯಕಿಯರಾದ ಸಿ.ಪಿ. ಸುಮಿತ್ರ ಮತ್ತು ಬಿ ಸುಮಿತ್ರ ಉಪಸ್ಥಿತರಿದ್ದರು.