ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸೀಸ್ ಘಟಕ ಮತ್ತು ಪ್ರಯೋಗ ಶಾಲಾ ಉಪಕರಣಗಳ ಉಧ್ಘಾಟನೆ ಸೋಮವಾರ ಬೆಳಿಗ್ಗೆ ನಡೆಯಿತು.
ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸರಕಾರಿ ಆಸ್ಪತ್ರೆಗಳು ಯಾವುದೇ ಖಾಸಾಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಶಾಸಕರ ಪ್ರದೇಶಾಭಿವೃಧ್ಧಿ ಯೋಜನೆಯ ಅನುದಾನದ ಮೂಲಕ ಒದಗಿಸಲಾಗಿದೆ. ರೋಟರಿ ಸಂಸ್ಥೆಯ ಕೊಡುಗೆಯೂ ಇಲ್ಲಿ ಸ್ಮರಣೀಯ . ಜನೌಷಧಿ ಕೇಂದ್ರದ ಮೂಲಕ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡುವ ಕೆಲಸ ಕಾರ್ಯಗಳು ನಡೆದಿದೆ. ಯಶಸ್ವಿನಿ ಯೋಜನೆಯನ್ನು ಜ್ಯಾರಿ ಮಾಡಿ ಆರ್ಥಿಕವಾಗಿ ಬಲಾಢ್ಯರಿಗೂ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಇಂದು ಹೈಟೆಕ್ ಆಸ್ಪತ್ರೆಳು, ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರಕಾರ ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿದೆ. ಎಂದು ಹೇಳಿದ ಅವರು, ರೋಟರಿ ಸಂಸ್ಥೆ ಬೆಳಕು ನೀಡುವ ಕೆಲಸ ಮಾಡಿದೆ ಎಂದರು.
ಕರಾವಳಿ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಪುತ್ತೂರು ಜಿಲ್ಲಾ ಕೇಂದ್ರವಾಗುವ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ 300 ಬೆಡ್ ಗೆ ಮೇಲ್ದರ್ಜೆಗೇರುವ ಜತೆಗೆ ಸರಕಾರಿ ಮೆಡಿಕಲ್ ಕಾಲೇಜು ಪೂರ್ವ ಯೋಜನೆಯಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಜೀವಂಧರ ಜೈನ್. ಉಪಾಧ್ಯಕ್ಷೆ ವಿದ್ಯಾಗೌರಿ, ಸಂಪ್ಯ ಆನಂದಾಶ್ರಮದ ಟ್ರಸ್ಟ್ ನ ಡಾ.ಗೌರಿ ಪೈ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಿವೃತ್ತ ಪ್ರಿನ್ಸಿಪಾಲ್ ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಯುವ ಸಂಸ್ಥೆಯ ರಾಜೇಶ್ವರಿ ಆಚಾರ್, ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು .
ಚಂದ್ರಕಲಾ ಬಳಗದವರು ಪ್ರಾರ್ಥಿಸಿದರು. ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ, ಸ್ವಾಗತಿಸಿದರು.