8 ವರ್ಷದ ಮಂಗೋಲಿಯನ್ ಬಾಲಕ : ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಆಧ್ಯಾತ್ಮಿಕ ನಾಯಕ

ದೆಹಲಿ : ಬೌದ್ಧ ಧರ್ಮದ ಸರ್ವೋಚ್ಛ ಧರ್ಮಗುರು ದಲೈ ಲಾಮಾ ಅವರು 8 ವರ್ಷದ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಿಸಿದ್ದಾರೆ.

ಅಮೆರಿಕದಲ್ಲಿ ಜನಿಸಿದ ಮಂಗೋಲಿಯನ್ ಬಾಲಕನಿಗೆ ಟಿಬೆಟ್ ಧರ್ಮಗುರು ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯ 10ನೇ ಲಾಮಾ ಎಂದು ಕರೆಯಲ್ಪಡುವ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿ ವೆಬ್ ಸೈಟ್ ವೊಂದು ಈ ಬಗ್ಗೆ ವರದಿ ಮಾಡಿದ್ದು, ದಲೈ ಲಾಮಾ ಅವರು ಎಂಟು ವರ್ಷದ ಬಾಲಕನೊಂದಿಗೆ ಮಾರ್ಚ್ 8 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಲ್ಲಿ ಗೋಚರವಾಗುವಂತೆ, ಕೆಂಪು ನಿಲುವಂಗಿ ಮತ್ತು ಮಾಸ್ಕ್ ಧರಿಸಿರುವ ಮಗು 87 ವರ್ಷದ ದಲೈ ಲಾಮಾ ಅವರನ್ನು ಭೇಟಿಯಾಗಿರುವುದನ್ನು ತೋರಿಸಿದೆ. ಅಮೇರಿಕಾದಲ್ಲಿ ಜನಿಸಿದ ಎಂಟು ವರ್ಷದ ಮಗುವಿಗೆ ಅವಳಿ ಸಹೋದರನಿದ್ದಾನೆ ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಗ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಎಂದು ತಿಳಿದುಬಂದಿದೆ.































 
 

ಎಂಟು ವರ್ಷದ ಮಗುವನ್ನು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಲಾಮಾ ಎಂದು ಕರೆದಿರುವುದು ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ, ಅದು ತನ್ನದೇ ಆದ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಅತ್ಯುನ್ನುತ ಲಾಮಾ ಎಂದು ಗುರುತಿಸಲಾಗುವುದು ಎಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ.
1995 ರಲ್ಲಿ, ದಲೈ ಲಾಮಾ ಅವರು 11 ನೇ ಪಂಚೆಮ್ ಲಾಮಾ ಎಂದು ಹೆಸರಿಸಿದಾಗ, ಚೀನಾದ ಅಧಿಕಾರಿಗಳು ಪಂಚೆಮ್ ನನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿದ ನಂತರ ಆ ಕುಟುಂಬ ಕಣ್ಮರೆಯಾಗಿತ್ತು. ಇದೀಗ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕನಾಗಿ ಘೋಷಣೆ ಮಾಡಲಾಗಿದೆ.

ದಲೈ ಲಾಮಾ ಅವರು ಈ ಮಗುವನ್ನು 10 ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಪುನರ್ಜನ್ಮ ಎಂದು ಬಣ್ಣಿಸಿದ್ದಾರೆ. ಬೌದ್ಧಧರ್ಮದಲ್ಲಿ ಧಾರ್ಮಿಕ ಮುಖಂಡರ ಪುನರ್ಜನ್ಮಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಧಾರ್ಮಿಕ ನಾಯಕನ ಪುನರ್ಜನ್ಮ ಸಮಾರಂಭವನ್ನು ನಡೆಸಲಾಯಿತು, ಅಲ್ಲಿ 600 ಮಂಗೋಲಿಯನ್ನರು ತಮ್ಮ ಹೊಸ ಆಧ್ಯಾತ್ಮಿಕ ನಾಯಕನನ್ನು ಆಚರಿಸಲು ಒಟ್ಟುಗೂಡಿದರು. ದಲೈ ಲಾಮಾ ಕೂಡ ಇಲ್ಲಿ ವಾಸಿಸುತ್ತಿದ್ದಾರೆ. ವರದಿ ಪ್ರಕಾರ, ದಲೈಲಾಮಾ ಅವರು ಎರಡು ದಿನಗಳ ಹಿಂದೆ ತಮ್ಮ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top