ಪುತ್ತೂರು: ನೆಹರುನಗರದಿಂದ ವಿವೇಕಾನಂದ ಕಾಲೇಜು ಸಂಪರ್ಕಿಸುವ ರಸ್ತೆಯಲ್ಲಿ ರೈಲ್ವೇ ಇಲಾಖೆಯ ಅನುದಾನ ರೂ.5.34 ಕೋಟಿ ವೆಚ್ಚದಲ್ಲಿ ರೈಲ್ವೇ ಮೇಲ್ಸೇತುವೆಯ ಅಗಲೀಕರಣ ಕಾಮಗಾರಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು..
ಶಾಸಕ ಸಂಜೀವ ಮಠಂದೂರು ತೆಂಗಿನ ಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನಮ್ಮ ಉದ್ದೇಶ ಇರುವುದು ಈ ರಸ್ತೆ ಮುಂದೆ ಚತುಷ್ಪತ ರಸ್ತೆಯಾಗಬೇಕು. ಈ ನಿಟ್ಟಿನಲ್ಲಿ ವಿವೇಕಾನಂದ ತೆಂಕಿಲದಲ್ಲಿ ಶಾಲೆಯ ಮುಂದಿರುವ ಚತುಷ್ಪತ ರಸ್ತೆಯಂತೆ ನೆಹರುನಗರ ದಿಂದ ವಿವೇಕಾನಂದ ಕಾಲೇಜು ಆಗಿ ಉಪ್ಪಿನಂಗಡಿ ಸಂಪರ್ಕಿಸುವ ಪಡೀಲು ತನಕ ಚತುಷ್ಪತ ರಸ್ತೆಗೆ ಪ್ರಸ್ತಾನವೆ ನೀಡಲಾಗಿದೆ. ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರಕ್ಕೆ ನೀಡಿದ್ದೇವೆ. ರೈಲ್ವೇ ಮೇಲ್ಸೇತುವೆ ಅಗಲೀಕರಣ ಆದ ತಕ್ಷಣ ಆದ್ಯತೆ ನೀಡಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತೆವೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್, ಟಿ.ಎಸ್, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಸತೀಶ್ ಭಟ್, ಕೇಂದ್ರ ಸರಕಾರದ ದಿಶಾ ನಾಮನಿರ್ದಶಿತ ಸದಸ್ಯ ರಾಮದಾಸ್ ಹಾರಾಡಿ, ನಗರಸಭೆ ಸ್ಥಳೀಯ ಸದಸ್ಯರಾದ ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ಪುರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿ ನೆಲಪ್ಪಾಲು, ರಾಘವೇಂದ್ರ ಪ್ರಭು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.