ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶ

ಗದಗ : 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಚೆಕ್ ಪೋಸ್ಟ್​ಗಳಲ್ಲಿ ನಿರ್ಮಿಸಿ, ಪೊಲೀಸರ ಹದ್ದಿನ ಕಣ್ಣು ಇಡಲಾಗಿದೆ. ಗಜೇಂದ್ರಗಡ ಚೆಕ್​​ಪೋಸ್ಟ್​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.40 ಲಕ್ಷ ಹಣವನ್ನ ಸೀಜ್ ಮಾಡಲಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರನ್ನ ಇಳಕಲ್ ನಾಕಾ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ಮಾಡಿದ್ದಾಗ ಹಣ ಪತ್ತೆಯಾಗಿದೆ. ಜೊತೆಗೆ 5 ಲಕ್ಷ ಮೌಲ್ಯದ ಸೀರೆ ಹಾಗೂ ಇತರ ವಸ್ತಗಳ ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ.

ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಬಳಿ ದಾಳಿ ನಡೆಸಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷದ 15 ಸಾವಿರ ರೂಪಾಯಿಯ ಜೊತೆ ಬಟ್ಟೆಗಳನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಕೊಪ್ಪಳದಿಂದ ಹೊಸಪೇಟೆಗೆ ಗೌತಮ್ ಜೈನ್ ಹಾಗೂ ಜಿತೇಂದ್ರ ಜೈನ್ ಎನ್ನುವವರು ದಾಖಲೆ ಇಲ್ಲದ ಲಕ್ಷಾಂತರೂ ಹಣವನ್ನ ಸ್ಕೂಟಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದರು. ಈ ವೇಳೆ ಸಿಪಿಐ ಸಂತೋಷ ಹಳ್ಳೂರ್‌ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ. ಕೊಪ್ಪಳದ ನಗರಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ಯಾದಿಗುಪ್ಪ ಚೆಕ್​ಪೋಸ್ಟ್​​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇಳಕಲ್​​ನಿಂದ ಕುಷ್ಟಗಿ ಕಡೆ ಹೋಗುತ್ತಿದ್ದ ಮಹಿಂದ್ರಾ ಸ್ಕಾರ್ಫಿಯೋ ಕಾರ್​ನ್ನ ತಪಾಸಣೆ ಮಾಡಿದ ವೇಳೆ ಹಣ ಪತ್ತೆಯಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆಜಿ ಬೆಳ್ಳಿ ಆಭರಣ ವಶ
ಸೂಕ್ತ ದಾಖಲೆಗಳು ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆ.ಜಿ ಬೆಳ್ಳಿ ಆಭರಣವನ್ನ ಜಪ್ತಿ ಮಾಡಲಾಗಿದೆ. ಬೆಂಗಳೂರಿನ ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top