ದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಈ ವರ್ಷದ ಮೂರನೇ ಮನ್ ಕಿ ಬಾತ್‌ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್ ಕಿ ಬಾತ್‌ನ 99ನೇ ಆವೃತ್ತಿ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಭಾಷಣ ಪ್ರಸಾರವಾಗಲಿದೆ.
ಈ ಮಾಸಿಕ ಬಾನುಲಿ ಕಾರ್ಯಕ್ರಮ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ಗಳಲ್ಲಿ ಪ್ರಸಾರಗೊಳ್ಳಲಿದೆ. ಜತೆಗೆ, ಆಲ್ ಇಂಡಿಯಾ ರೇಡಿಯೋ (AIR) ನ್ಯೂಸ್ ವೆಬ್‌ಸೈಟ್‌ನಲ್ಲಿ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ. ಇದನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಐಆರ್ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಮೊದಲು ಹಿಂದಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಬಳಿಕ ಎಐಆರ್ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ.
ಮನ್ ಕೀ ಬಾತ್ ಇದೀಗ 99ನೇ ಆವೃತ್ತಿಗೆ ತಲುಪಿದೆ. ಮುಂದಿನ ತಿಂಗಳು 100ನೇ ಎಪಿಸೋಡ್ ಇರಲಿದೆ. ಮೊದಲ ಬಾರಿಗೆ ಅಕ್ಟೋಬರ್ 3, 2014ರಲ್ಲಿ ಮನ್ ಕೀ ಬಾತ್ ಆರಂಭವಾಗಿತ್ತು. ಅಂದಿನಿಂದ ನಿರಂತರವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮನ್ ಕೀ ಬಾತ್‌ನಲ್ಲಿ ಮಾತನಾಡುತ್ತಿದ್ದಾರೆ.
100ನೇ ಮನ್ ಕೀ ಬಾತ್‌ಗಾಗಿ ಭಾರತೀಯ ಜನತಾ ಪಕ್ಷವು ಕೆಲವು ವಿಶೇಷ ಅರೇಂಜ್‌ಮೆಂಟ್‌ಗಳನ್ನು ಮಾಡುತ್ತಿದೆ. ಏಪ್ರಿಲ್ 30ರಂದು ಮನ್ ಕೀ ಬಾತ್‌ನ 100ನೇ ಆವೃತ್ತಿ ಪ್ರಸಾರಗೊಳ್ಳಲಿದೆ. ವಿಶೇಷವೆಂದರೆ 100ನೇ ಆವೃತ್ತಿಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವು ಭಾರತ ಮಾತ್ರವಲ್ಲದೆ ಇತರೆ ದೇಶಗಳಲ್ಲಿಯೂ ಪ್ರಸಾರಗೊಳ್ಳಲಿದೆ.