ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಅವಳಿ ಪುರುಷರಾದ ಕೋಟಿ-ಚೆನ್ನಯ ನಾಮಕರಣ | ಸಮಾರಂಭ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೇವಲ ಒಂದು ಧರ್ಮಕ್ಕೆ ಸೀಮಿತ ಮಾಡದೇ ಹಿಂದೂ ಸಮಾಜಕ್ಕೆ ಸಂದೇಶ ನೀಡಿದ ಅವಳಿ ವೀರರು ಎಂದು ನಾವೆಲ್ಲರೂ ಪರಿಗಣಿಸಬೇಕಾದ ಅಗತ್ಯವಿದ್ದು, ತುಳುನಾಡಿನ ಅವಳಿವೀರ ಪುರುಷರಾದ ಕೋಟಿ-ಚೆನ್ನಯರ ಹೆಸರನ್ನು ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ನೀಡುವ ಮೂಲಕ ಪುತ್ತೂರಿನಲ್ಲಿ ಇತಿಹಾಸ ನಿರ್ಮಾಣ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಭಾನುವಾರ ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಅವಳಿ ವೀರರಾದ ಕೋಟಿ-ಚೆನ್ನಯ ನಾಮಕರಣ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಶುರಾಮ ಸೃಷ್ಟಿಯ ದೈವಾಂಶ ಸಂಭೂತರಾದ ಕೋಟಿ-ಚೆನ್ನಯರನ್ನು ಕರಾವಳಿಯಲ್ಲಿ 264 ಗರಡಿಗಳಲ್ಲಿ ಆರಾಧನೆ ಮಾಡಲಾಗುತ್ತದೆ. ಒಂದೇ ಜಾತಿ-ಕುಲ-ಮತ ಸಂದೇಶ ನೀಡಿದ ಕೋಟಿ-ಚೆನ್ನಯರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರ ಮಾಡಡುವ ಮೂಲಕ ಅವರು ಸಮಾಜಕ್ಕೆ ನೀಡಿದ  ಸಂದೇಶಗಳನ್ನು ಮುಂದಿನ ಪೀಳಿಗೆಯವರು ನೆನಪಿ ನಿಟ್ಟಿನಲ್ಲಿ ನಡೆದಿದೆ ಎಂದ ಅವರು, ಪರಶುರಾಮ ಸೃಷ್ಟಿಯ ದೈವಾಂಶ ಸಂಭೂತರು ಎಂದು 264 ಗರಡಿಗಳಲ್ಲಿ  ಅವರ ಆರಾಧನೆ ಮಾಡಲಾಗುತ್ತಿದೆ ಎಂದರು.































 
 

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಬಹಳಷ್ಟು ಇತಿಹಾಸ ಇರುವ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ಜನನ ಆಗಿದೆ. ಅವರ ಹೆಸರನ್ನು ಇಡುವ ಮೂಲಕ ವಿಶೇಷ ಗೌರವವನ್ನು ಅವಳಿ ಪರುಷರಿಗೆ ನೀಡುತ್ತಿದ್ದೇವೆ. ಇದಕ್ಕೆ ಕಾರಣಕರ್ತರಾದ ಶಾಸಕ ಸಂಜೀವ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಇತಿಹಾಸಕ್ಕೆ ಕೋಟಿ-ಚೆನ್ನಯರು ನಕ್ಷತ್ರ ಇದ್ದಂತೆ – ಹರಿಕೃಷ್ಣ ಬಂಟ್ವಾಳ್

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಪುತ್ತೂರಿನ ಚರಿತ್ರೆಗೆ, ಇತಿಹಾಸಕ್ಕೆ ನಕ್ಷತ್ರದಂತೆ ಇರುವ ಶಕ್ತಿ ಕೋಟಿ-ಚೆನ್ನಯ. ಅವರ ಹೆಸರು 600 ವರ್ಷಗಳ ಹಿಂದೆ ಪರಿಚಯವಾಗಿದೆ. ಕೋಟಿ-ಚೆನ್ನಯರ ಹೆಸರಿನಲ್ಲಿ ಕರಾವಳಿಯಲ್ಲಿ 264 ಗರಡಿಗಳಿವೆ. ಕೋಟ್ಯಾಂತರ ಜನ ಕೋಟಿ-ಚೆನರನ್ನು ಆರಾಧಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಕೋಟಿ-ಚೆನ್ನಯರ ಅಧ್ಯಯನ, ಸಂಶೋಧನೆ ಮಾಡಿರುವವರು ಬಹಳ ಕಡಿಮೆ. ಜರ್ಮನಿ ವಿದ್ವಾಂಸ ಫೆಡ್ರಿಂಗ್ ಮ್ಯಾಂಗನೂರ್ 1882 ರಲ್ಲಿ ಮಂಗಳೂರಿಗೆ ಬಂದು ತುಳುವಿನ ಪಾರ್ದನ ಕಲಿತು ಅಕ್ಷರದ ಜ್ಞಾನ ನೀಡಿದವರು. ಪಡುಮಲೆ ಅನ್ನ, ನೀರು ಕುಡಿದವರು, ಅವರು ಸಂದೇಶದ ನೀಡಿದ ಮಣ್ಣು ಮೂಲಸ್ಥಾನ. ಪಡುಮಲೆ. ಅಂತರ ವೀರ ಪುರುಷರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಟ್ಟಿರಲು ಕಾರಣರಾದ ಪುತ್ತೂರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಕೋಟಿ-ಚೆನ್ನಯ ಹೆಸರಿಡುವಲ್ಲಿ ಶಾಸಕರ ಮುತುವರ್ಜಿ ಕಾಣುತ್ತಿದೆ : ಜೀವಂಧರ್ ಜೈನ್

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಧಾರ್ಮಿಕ ವಿಚಾರಗಳಲ್ಲಿ ದೈವ-ದೇವರುಗಳು ಸಾಂಸ್ಕೃತಿಕ ಕಲೆ. ಧರ್ಮದ ಬಗ್ಗೆ ಒಂದಷ್ಟು ಮಾರ್ಗದರ್ಶ ನೀಡಿದ ಮಹಾಪುರುಷರು. ಹೆಸರು ಇಡುವ ಕುರಿತು ಮಂಡಿಸಿದಾಗ ನಾವು ಕೇಲವ ನಿರ್ಣಯ ಮಾಡಿದವರು. ಇದರ ಹಿಂದೆ ಶಾಸಕರು ಒಂದೂ ವರ್ಷದಿಂದ ಮುತುವರ್ಜಿ ವಹಿಸಿದರು ಶಾಸಕರು. ಇದೀಗ ಹೆಸರಿಡುವ ಮೂಲಕ ಪುತ್ತೂರಿನ ಗರಿಮೆಗೆ ಕಿರೀಟ ತಂದಂತಾಗಿದೆ.

ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಮಾತನಾಡಿ, ತುಳುನಾಡಿನ ಸಂಸ್ಕತಿ, ಆಚಾರ ವಿಚಾರ, ದೇವರು, ದೈವಗಳ ಆರಾಧನೆ, ನಾಗಾರಾಧನೆ, ಕಂಬಳಕ್ಕೆ ದ.ಕ.ಜಿಲ್ಲೆಯ ತವರೂರು. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ ವೀರರಾದ ಕೋಟಿ-ಚೆನ್ನಯ. ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಬದ್ಧರಾಗಿದ್ದು, ಸರಕಾರದ ಪರವಾಗಿ ನಾವಿದ್ದೇವೆ ಎಂದರು.

ಶಾಸಕರ ಮುತುವರ್ಜಿಯಿಂದ ಪ್ರತಿಫಲ ಸಿಕ್ಕಿದೆ – ಜಯಂತ ನಡುಬೈಲು

ಜಯಂತ ನಡುಬೈಲು ಮಾತನಾಡಿ, 2019 ರಲ್ಲಿ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ಮನವಿ ನೀಡಿದ್ದೇವು. ಶಾಸಕರ ಮುತುವರ್ಜಿಯಿಂದ ಪ್ರತಿಫಲ ಸಿಕ್ಕಿದೆ ಎಂದ ಅವರು, ಗೆಜ್ಜೆಗಿರಿ ಕ್ಷೇತ್ರ ಸಂಪರ್ಕ ರಸ್ತೆಗೆ ಪೂರಕ ವ್ಯಸವ್ಥೆಗೆ ಮನವಿ ಮಾಡಿದ್ದೆವು. ಅದಕ್ಕೆ ಅನುದಾನ ಒದಗಿಸಿಕೊಡುವ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಕಾರಣಿಕ ಸ್ಥಳ ಪಡುಮಲೆ., ಗೆಜ್ಜೆಗಿರಿ ಯಲ್ಲಿ ನೆಲೆಯಾಗಿರುವ ಅವಳಿ ರಪುರುಷರಾದ ಕೋಟಿ-ಚೆನ್ನಯರ ಹೆಸರು ಇಡುವ ಮೂಲಕ ನಾಡಿನಾದ್ಯಂತ ಪಸರಿಸುವ ಕೆಲಸವನ್ನು ಶಾಸಕ ಸಂಜೀವ ಮಠಂದೂರು ಮಾಡಿದರುವುದು ಅಂಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಂಘಟನೆಗಳ ವತಿಯಿಂದ ಶಾಸಲು ಹೊದಿಸಿ, ಫಲಪುಷ್ಪ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ,, ಬಿಜೆಪಿ ಒಬಿಸಿ ಮೋರ್ಚಾದ ಆರ್.ಸಿ.ನಾರಾಯಣ,,ಪೌರಾಯುಕ್ತ ಮಧು ಎಸ್,ಮನೋಹರ್, ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರ್, ಗೆಜ್ಜೆಗಿರಿ ಕ್ಷೇತ್ರದ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೆಎಸ್ ಆರ್ ಟಿಸಿ ಬಿ.ಸಿ.ರೋಡು ಘಟಕದವರು ನಾಡಗೀತೆ ಹಾಡಿದರು.ಕೆಎಸ್ ಆರ್ ಟಿಸಿ ಪುತ್ತೂರು ಘಟಕದ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ಘಟಕದ ಉಮೇಶ್ ಶೆಟ್ಟಿ, ಮಧುಕರ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top