ಗಂಗಾ ಪಾದೆಕಲ್ಲು ಅವರಿಗೆ ನಿರಂಜನ ಪ್ರಶಸ್ತಿ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಶಿವರಾಮಕಾರಂತ ಅಧ್ಯಯನ ಕೇಂದ್ರದಿಂದ ಕೊಡಮಾಡುವ ನಿರಂಜನ ಪ್ರಶಸ್ತಿಯನ್ನು ಈ ವರ್ಷ ಕತೆಗಾರರು, ಕಾದಂಬರಿಕಾರರಾದ ಗಂಗಾ ಪಾದೇಕಲ್ಲು ಅವರಿಗೆ ನೀಡಲಾಗುವುದು ಎಂದು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ತಿಳಿಸಿದ್ದಾರೆ.

ನಿರಂಜನ ಪ್ರಶಸ್ತಿಯು  15 ಸಾವಿರ ರೂ. ನಗದು, ಪ್ರಶಸಿ  ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಗಂಗಾ ಪಾದೇಕಲ್ಲು ಅವರು ಸೆಪ್ಟಂಬರ್ 01, 1985 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಗಂಗಾರತ್ನ. ಮುಳಿಯ ಕೇಶವ ಭಟ್ಟ ಹಾಗೂ ಸರಸ್ವತಿ ಅಮ್ಮ ಅವರ ತಂದೆ ತಾಯಿ. ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಗಂಗಾರತ್ನಅವರು ಹದಿನಾರನೆ ವಯಸ್ಸಿನಲ್ಲಿ ಪಾದೇಕಲ್ಲುಗೋವಿಂದ ಭಟ್ಟರನ್ನು ವಿವಾಹವಾದರು. ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ತಮ್ಮ 34 ನೆಯ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ತಮ್ಮ ಸಾಹಿತ್ಯಕ ಕೊಡುಗೆಗಳ ಮೂಲಕ ನಾಡಿನಾದ್ಯಂತ ಹೆಸರು ಗಳಿಸಿದರು.































 
 

ಪುಲಪೇಡಿ ಮತ್ತು ಇತರ ಕತೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಹೊಸಹೆಜ್ಜೆ, ವಾಸ್ತವ, ಕ್ಷಮಯಾಧರಿತಿ, ನೆಲೆ ತಪ್ಪಿದ ಹಕ್ಕಿ, ಮನ್ನಣೆಯದಾಹ, ಈ ಪ್ರಜಾರಾಜ್ಯದಲ್ಲಿ, ಸಂಕ್ರಮಣ, ಚಿನ್ನದ ಸೂಜಿ ಇವರ ಕಥಾ ಸಂಕಲನಗಳು. ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಅದೃಷ್ಟರೇಖೆ, ಕನಕಾಂಬರಿ, ಸೆರಗಿನಕೆಂಡ, ಇನ್ನೊಂದು ಅಧ್ಯಾಯ, ಬಂಗಾರದ ಜಿಂಕೆ ಹಿಂದೆ ಇವರ ಕಾದಂಬರಿಗಳು. ಆಯ್ದ ಕತೆಗಳು, ಪ್ರತಿಬಿಂಬ, ಮುಳಿಯ ಮೂಕಾಂಬಿಕೆ, ಏರ್ಯಚಂದ್ರ ಭಾಗಿ ರೈ  ಸಂಪಾದಿತ ಕೃತಿಗಳು. ಪ್ರಶಸ್ತಿ : ಸೆರೆಯಿಂದ ಹೊರಗೆಕಾದಂಬರಿಗೆಕನ್ನಡಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಶ್ರೀಮತಿ ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ ದೊರಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top