ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ (72 ವರ್ಷ) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಬಿಎ, ಬಿ.ಎಲ್ ಪದವೀಧರರಾದ ಅಂಜನ ಮೂರ್ತಿ 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. 1989-1994 ಮತ್ತು 1999, ಫೆ.23 2004 ರಿಂದ 2007 ಠಂಪಿಂಗ್ ಮೂರು ಬಾರಿ ಆಯ್ಕೆ ಸಮೀಪದ ಪ್ರತಿಸ್ಪರ್ಧಿಗಿಂತ 37000 ಮತಗಳ ಬಹುಮತ ಸಾಧಿಸಿದ್ದರು.

ಮಾರ್ಚ್ 1993ರಲ್ಲಿ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005-06 ರಿಂದ ವಸತಿ ಸಚಿವರಾಗಿದ್ದರು. ನವದೆಹಲಿಯಲ್ಲಿ ನಡೆದ 89 ಅಂತರ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
1994ರಲ್ಲಿ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಪೀಠಾಧಿಪತಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಿಯೋಮಣಿ ಸಂಸ್ಥೆ, ನವದೆಹಲಿಯಿಂದ ಶಿರೋಮಣಿ ವಿಕಾಸ್ ಪ್ರಶಸ್ತಿ ನೀಡಿ ಅಂಜನ ಮೂರ್ತಿಯವರನ್ನು ಗೌರವಿಸಿತ್ತು. ಮಾನವ ಸೇವಾ ಪುರಸ್ಕಾರ, 1993ರಲ್ಲಿ ವಿಶೇಷ ಸ್ಕ್ರಾಲ್ ಆಫ್ ಆನರ್ ಸೇರಿದಂತೆ ಕೆಲವು ಗೌರವಗಳು ಸಿಕ್ಕಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top