ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಘೋಷಣೆಗೆ ಮತದಾರರಿಂದ ಉತ್ತಮ ಬೆಂಬಲ  : ಅಮಲ ರಾಮಚಂದ್ರ

ಪುತ್ತೂರು: ಮುಂಬರುವ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ಪಕ್ಷವು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದಕ್ಕೆ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಇದರಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.

ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ ಬಂದರೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್,  ಮನೆ ಯಜಮಾನಿಗೆ ಮಾಸಿಕ ರೂ 2000, ಬಿಪಿಎಲ್ ಕಾರ್ಡ್‍ದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಹಾಗೂ ಪದವೀಧರರಿಗೆ  ತಿಂಗಳಿಗೆ ರೂ. 3000 ಮತ್ತು ಡಿಪ್ಲೋಮದಾರರಿಗೆ ತಿಂಗಳಿಗೆ ರೂ. 1500 ನೀಡುವುದಾಗಿ ಘೋಷಿಸಿದೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಹಿಯುಳ್ಳ ಈ ಯೋಜನೆಗಳನ್ನು ಮುದ್ರಿಸಿರುವ ಗ್ಯಾರಂಟಿ ಕಾರ್ಡನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.

ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೇರಿರುವ ಬಿಜೆಪಿ ನಿರಂತರ ಭ್ರಷ್ಟಾಚಾರ ನಡೆಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದು, ಇದೀಗ  ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳಿಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಕಂಗಲಾಗಿದ್ದಾರೆ ಎಂದರು.































 
 

ರೈತರಿಗೆ ಕುಮ್ಕಿ ಹಕ್ಕು, ಒಂದು ಲಕ್ಷ ಸಾಲ ಮನ್ನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ತಿಂಗಳೊಳಗೆ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಜಾರಿಗೆ ತರುವುದು, ವಿದ್ಯಾರ್ಥಿನಿಯರಿಗೆ ನ್ಯಾಪ್ ಕಿನ್, ರಾಜ್ಯದಲ್ಲಿ NIA ಕಛೇರಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಹೀಗೆ ನೂರಾರು ಭರವಸೆಯನ್ನು ಕಳೆದ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಬಿಜೆಪಿಯನ್ನು ಇವು ಯಾವುದನ್ನು ಪೂರ್ಣಗೊಳಿಸಿಲ್ಲ ಎಂದರು.

 ಆದರೆ 2013ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 165 ಅಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಆ ಪೈಕಿ 159 ಭರವಸೆಗಳನ್ನು ಪೂರ್ಣಗೊಳಿಸಿದೆ. ಅನ್ನಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ, ಮಾತೃ ಭೂಮಿ, ಮನಸ್ವಿ, ಮೈತ್ರಿ ಅರುಂಧತಿ, ಕ್ಷೀರಧಾರೆ, ವಿದ್ಯಾಸಿರಿ ಹೀಗೆ ಬಹುತೇಕ ಎಲ್ಲ ಭರವಸೆಗಳನ್ನು ಪೂರೈಸಿ ನುಡಿದಂತೆ ನಡೆದಿದೆ. ಇದೆ ರೀತಿ ಈ ಬಾರಿ ಘೋಷಿಸಿರುವ 4 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು 100 ಪ್ರತಿಶತ ಜಾರಿ ಮಾಡಲಿದ್ದೇವೆ ಎಂದರು.

ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡದ ಬಿಜೆಪಿ ಅದನ್ನು ಮರೆಮಾಚಲು ದೈವ, ದೇವರು ಉರಿ ಗೌಡ ಮತ್ತು ನಂಜೇ ಗೌಡರಂತಹ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಮೊನ್ನೆ ಪುತ್ತೂರಿಗೆ ಬಂದ ಮಾಜಿ ಸಚಿವ ಈಶ್ವರಪ್ಪ ಪವಿತ್ರವಾದ ದೇವಸ್ಥಾನದ ಗದ್ದೆಯಲ್ಲಿ ಬೇಕಾ ಬಿಟ್ಟಿ ನಾಲಗೆ ಹರಿ ಬಿಟ್ಟು ಅವಾಚ್ಯ ಶಬ್ಧಗಳ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್, ಎಸ್‍ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top