ಪಿಎಫ್‌ಐ ನಿಷೇಧ : ಕೇಂದ್ರದ ಕ್ರಮ ಸರಿ ಎಂದ ನ್ಯಾಯಾಧಿಕರಣ

ಯುಎಪಿಎ ಕಾಯಿದೆಯಡಿ 5 ವರ್ಷ ನಿಷೇಧಕ್ಕೆ ಸಮರ್ಥನೆ

ಹೊಸದಿಲ್ಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಯುಎಪಿಎ ನ್ಯಾಯಾಧಿಕರಣ ಎತ್ತಿ ಹಿಡಿದಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಿಎಫ್‍ಐ ಮೇಲೆ ವಿಧಿಸಿದ ನಿಷೇಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯಲ್ಲಿ ನ್ಯಾಯಾಧಿಕರಣ ರಚಿಸಲಾಗಿತ್ತು.
ಪಿಎಫ್‍ಐ ಮೇಲೆ ನಿಷೇಧ ಹೇರಿದ ಕ್ರಮದ ಬಗ್ಗೆ ದೇಶದ ವಿವಿಧೆಡೆ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕೇಂದ್ರದ ಆದೇಶವನ್ನು ಎತ್ತಿ ಹಿಡಿದೆ.
ಕಳೆದ ವರ್ಷ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್ 3ರ ಅಡಿಯಲ್ಲಿ ಪಿಎಫ್‍ಐ ಮತ್ತು ಅದರ ಸಹೋದರ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಗೃಹ ಸಚಿವಾಲಯ ಘೋಷಿಸಿ ಐದು ವರ್ಷ ನಿಷೇಧ ಹೇರಿತ್ತು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ, 2019ರಲ್ಲಿ (ಯುಎಪಿಎ 2019) ಯಾವುದೇ ಕಾನೂನಿನ ಪ್ರಕ್ರಿಯೆ ಇಲ್ಲದೆ ವ್ಯಕ್ತಿಗಳನ್ನು ಉಗ್ರರು ಎಂದು ಘೋಷಿಸಲು ಸರ್ಕಾರಕ್ಕೆ ಅವಕಾಶ ನೀಡಲಾಗಿದೆ. ಸೆಕ್ಷನ್ 35ರ ಅಡಿ ಈ ಮೊದಲು ಸಂಘಟನೆಯನ್ನು ಮಾತ್ರವೇ ಭಯೋತ್ಪಾದಕ ಎಂದು ವರ್ಗೀಕರಿಸಲು ಅವಕಾಶವಿತ್ತು. ತಿದ್ದುಪಡಿ ಬಳಿಕ ವ್ಯಕ್ತಿಗಳನ್ನು ಕೂಡ ಭಯೋತ್ಪಾದಕ ಎಂದು ಘೋಷಿಸಲು ಅವಕಾಶ ಕಲ್ಪಿಸಲಾಯಿತು.



































 
 

ವ್ಯಕ್ತಿ ಹಾಗೂ ಸಂಘಟನೆಯು ಭಯೋತ್ಪಾದನೆಯಲ್ಲಿ ಭಾಗಿಯಾಗಿದೆ ಎಂದು ಸರ್ಕಾರಕ್ಕೆ ಅನಿಸಿದರೆ, ವ್ಯಕ್ತಿ ಅಥವಾ ಸಂಘಟನೆ ಹೆಸರನ್ನು ಕಾಯ್ದೆಯ 1ನೇ ಪರಿಚ್ಛೇದಕ್ಕೆ ಸೇರಿಸಲಾಗುತ್ತದೆ. ಅದರ ಅಡಿ ನಿಷೇಧ ಹೇರಲು ಸಾಧ್ಯವಾಗುತ್ತದೆ. ಯುಎಪಿಎ ಕಾಯ್ದೆ ಸೆಕ್ಷನ್ 3ರ ಅಡಿ ಸರ್ಕಾರವು ತನ್ನ ಗೆಜೆಟ್ ಅಧಿಸೂಚನೆ ಮೂಲಕ ಯಾವುದೇ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಘೋಷಿಸಬಹುದಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top