ಪುತ್ತೂರು: ಶತಮಾನದ ಕಡೆಗೆ ಹೋಗಬೇಕಿದ್ದರೆ ನಾವು ಶಾಲಾ ಅಭಿವೃದ್ಧಿಗಾಗಿ ನಾವು ಏನು ಮಾಡಬೇಕು ಎಂಬ ಯೋಚನೆಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಗಳನ್ನು ಶಾಲೆಗಳಿಗೆ ಒದಗಿಸಲಾಗುತ್ತಿದೆ. ಜತೆಗೆ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮಣಿಕ್ಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.
ಈ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ಮುಂದೆ ಹೆತ್ತವರು ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ ಮಾಡದೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಸರ್ಕಾರಿ ಶಾಲೆ ಇಂದು 75 ವರ್ಷ ಪೂರೈಸಿ ಈ ಭಾಗದ ಬಡ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕೊಡುವ ಮುಖಾಂತರ ಮತ್ತೊಮ್ಮೆ ಈ ದೇಶಕ್ಕೆ ಕೊಡುಗೆಯನ್ನು ಕೊಡಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್., ಸಿಆರ್ ಪಿ ಶಿವಪ್ರಸಾದ್ ಎಲ್ ಎನ್., ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ್ ಸುಂದರ ರೈ, ಎಸ್ ಡಿ ಎಮ್ ಸಿ ಅಧ್ಯಕ್ಷ ಅಬ್ದುಲ್ ರಹೀಮ್ ಪಂಚೆ, ಉಪಾಧ್ಯಕ್ಷೆ ನಾಗವೇಣಿ, ಪಂಚಾಯಿತಿ ಸದಸ್ಯೆ ಶುಭ ಲತಾ, ಸುನೀಲ್ ರೈ, ನೇಮಿರಾಜ್ ಪಾಂಬಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಂದರ ಪೂಜಾರಿ, ಪದ್ಮನಾಭ, ಸರಸ್ವತಿ, ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಸಹಾಯಕ ಶಿಕ್ಷಕಿ ಜಾನಕಿ ಸ್ವಾಗತಿಸಿದರು.