ದಿಲ್ಲಿ, ಉತ್ತರ ಪ್ರದೇಶದಲ್ಲೂ ಕಂಪಿಸಿದ ಭೂಮಿ
ಇಸ್ಲಾಮಾಬಾದ್ : ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ ಪಾಕಿಸ್ಥಾನದ ವಾಯವ್ಯ ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದಿಲ್ಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಈ ಭೂಕಂಪದಿಂದ ಅನುಭವವಾಗಿದೆ. ಇಲ್ಲೂ ಪ್ರಬಲವಾದ ಕಂಪನ ಸಂಭವಿಸಿದೆ.
ಮಂಗಳವಾರದಂದು 6.6 ತೀವ್ರತೆಯ ಭೂಕಂಪವು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ಬಹುಭಾಗವನ್ನು ತಲ್ಲಣಗೊಳಿಸಿದೆ. ಭಯಭೀತರಾದ ನಿವಾಸಿಗಳು ಮನೆಗಳು ಮತ್ತು ಕಚೇರಿಗಳಿಂದ ಹೊರಗೋಡಿದ್ದಾರೆ. ದೂರದ ಹಳ್ಳಿಗಳಲ್ಲೂ ಜನರಿಗೆ ಭೂಕಂಪದ ಅನುಭವವಾಗಿ ಭಯಭೀತರಾಗಿದ್ದಾರೆ.
ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.