ಪುತ್ತೂರು: ಶಾಂತಿಗೋಡು ಗ್ರಾಮದ ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮಾ. 22ರ ಬುಧವಾರ ಲೋಕಾರ್ಪಣೆಗೊಳ್ಳಲಿದೆ.
ಬಲ್ಲೇಗಳೇ ತುಂಬಿದ ಊರು ಬಲೆರಾವು. ತೀರಾ ಹಿಂದುಳಿದ ಪ್ರದೇಶ ಎನ್ನುವುದು ಹೆಸರಿನಿಂದಲೇ ತಿಳಿದುಬರುವ ಸತ್ಯ. ಇದೀಗ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಊರಿನ ಚಿತ್ರಣವನ್ನೇ ಬದಲಾಯಿಸಲಿದೆ. ಇದರೊಂದಿಗೆ ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಶಾಂತಿಗೋಡು ಗ್ರಾಮಕ್ಕೆ ಪುತ್ತೂರು ಶಾಸಕರು ಭರಪೂರ ಅನುದಾನವನ್ನು ಮಂಜೂರುಗೊಳಿಸಿದ್ದಾರೆ.
ಬಲೆರಾವು ಪ್ರದೇಶದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಸಣ್ಣ ನೀರಾವರಿ ಇಲಾಖೆಯ ವಿಶೇಷ ಅನುದಾನದಡಿ 3 ಕೋಟಿ ರೂ. ಮಂಜೂರು ಮಾಡಲಾಗಿದೆ. 1.20 ಕೋಟಿ ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆದಿದೆ.
ಬಲೆರಾವು ಪ್ರದೇಶದಿಂದ ನೂರು ಮೀಟರ್ ದೂರದಲ್ಲಿ ಕುಮಾರಧಾರ ನದಿ ಹರಡಿಕೊಂಡಿದ್ದು, ಗೌರಿ ಹೊಳೆ ಮುಂದೆ ಸಾಗಿ ಇದೇ ಪ್ರದೇಶದಲ್ಲಿ ಕುಮಾರಧಾರ ಜೊತೆ ಒಂದಾಗುತ್ತದೆ. ಇದೇ ಗೌರಿ ಹೊಳೆಗೆ ಕಿಂಡಿ ಅಣೆಕಟ್ಟು ಕಟ್ಟಬೇಕು ಎನ್ನುವ ಕನಸು ಇದೀಗ ನನಸಾಗಿದೆ.
ಶಾಂತಿಗೋಡು ಗ್ರಾಮಕ್ಕೆ ಶಾಸಕರ ಅನುದಾನದಡಿ 2018ರಿಂದ 23ರವರೆಗೆ ಬಿಡುಗಡೆಯಾದ ಅನುದಾನದ ವಿವರ ಇಂತಿವೆ:
ಗಡಿಪಿಲ ವೀರಮಂಗಲ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 4 ಲಕ್ಷ ರೂ., ಗಡಿಪಿಲ ಖಂಡಿಗ ಪರಿಶಿಷ್ಟ ಪಂಗಡ ಕಾಲನಿ ರಸ್ತೆಗೆ 12.80 ಲಕ್ಷ ರೂ., ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಳವೆಬಾವಿಗೆ 1 ಲಕ್ಷ ರೂ., ಗಡಿಪಿಲ ವೀರಮಂಗಲ ರಸ್ತೆ,ಗೆ 14.25 ಲಕ್ಷ ರೂ., ಕೂಡುರಸ್ತೆ ಮುಂಡೋಡಿ ರಸ್ತೆಗೆ 4.70 ಲಕ್ಷ ರೂ., ಆನಡ್ಕ ಮಲೆಪಡ್ಪು ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 10 ಲಕ್ಷ ರೂ., ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 1.50 ಲಕ್ಷ ರೂ., ಶಾಂತಿಗೋಡು ವಿಷ್ಣುಮೂರ್ತಿ ದೇವಾಲಯದ ಬಳಿ ತೋಡಿಗೆ ಕಾಲುಸಂಕ ರಚನೆಗೆ 3 ಲಕ್ಷ ರೂ., ಬಜಕ್ಕಳ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಮುಂಡೋಡಿ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ವೀರಮಂಗಲ ಕೊಯಕ್ಕುಡೆ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಕಕ್ವೆ ಪುರುಷರಕಟ್ಟೆ ರಸ್ತೆಗೆ 15 ಲಕ್ಷ ರೂ., ಸಾಸ್ತಾವಿಗೆ ಹೋಗುವ ರಸ್ತೆ ಕಾಂಕ್ರಿಟೀಕರಣಕ್ಕೆ 15 ಲಕ್ಷ ರೂ., ಸರೋಳಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಕಕ್ವೆಯಿಂದ ಆನಡ್ಕ ರಸ್ತೆ ಕಾಂಕ್ರಿಟೀಕರಣ ಮತ್ತು ಮೋರಿ ರಚನೆಗೆ 10 ಲಕ್ಷ ರೂ., ಶಾಂತಿಗೋಡಿನಿಂದ ಕಲ್ಲಾಜೆ ರಸ್ತೆ ಕಾಂಕ್ರಿಟೀಕರಣಕ್ಕೆ 15 ಲಕ್ಷ ರೂ., ಆನಡ್ಕ ಮಲೆಪಡ್ಪು ಶಾಂತಿಗೋಡು ಸಂಪರ್ಕ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ., ವೀರಮಂಗಲ ಡಬೆಲ್ಲಿ ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಕೂಡುರಸ್ತೆ ಕಲ್ಲರ್ಪೆ ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ವೀರಮಂಗಲ ಎಂಬಲ್ಲಿ ಏತ ನೀರಾವರಿ ಯೋಜನೆ ಅಭಿವೃದ್ಧಿ ಕಾಂಗಾರಿಗೆ 15.41 ಲಕ್ಷ ರೂ., ಆನಡ್ಕ ಪಂಜಿಗ ಎಂಬಲ್ಲಿ ಅಭಿವೃದ್ಧಿ ಕಾಮಗಾರಿಗೆ 30 ಲಕ್ಷ ರೂ., ವೀಮಮಂಗಲ ಶೀನಪ್ಪರವರ ಜಮೀನು ಬಳಿ ಅಭಿವೃದ್ಧಿಗೆ 10 ಲಕ್ಷ ರೂ., ಆನಡ್ಕ ಪುರುಷರಕಟ್ಟೆ 103.04 ಲಕ್ಷ, ಶಾಂತಿಗೋಡು ರಸ್ತೆಗೆ 6.50 ಕೋಟಿ, ಆನಡ್ಕ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ., ಪುರುಷರಕಟ್ಟೆ ಆನಡ್ಕ ರಸ್ತೆ ಅಭಿವೃದ್ಧಿಗೆ ಮುಂದುವರೆದ ಕಾಮಗಾರಿಗೆ 14 ಲಕ್ಷ ರೂ., ಪೇರಡ್ಕ ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಗಡಿಪಿಲದಿಂದ ಕಾಯರ್ ಮುಗೇರು ರಸ್ತೆ ದುರಸ್ತಿಗೆ 5 ಲಕ್ಷ ರೂ., ಸ.ಹಿ.ಪ್ರಾ.ಶಾಲೆ ಆನಡ್ಕ ಛಾವಣಿ ದುರಸ್ತಿಗೆ 25 ಸಾವಿರ, ಪುಡಿಂಕಲಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಆನಡ್ಕ ವಾಲ್ತಾಜೆ ಪುಚ್ಚೆತ್ತಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ 6 ಲಕ್ಷ ರೂ., ಆನಡ್ಕ ಬೂತ್ನ ಕರ್ಗಲ್ಲು ಮರಕ್ಕೂರು ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಶಾಂತಿಗೋಡು ಪಂಜಿಗುರಿ ಮಣಿಯ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಬೊಲ್ಲಮೆ ಕೆಮ್ಲಾಜೆ ಎಂಬಲ್ಲಿ ನರಿಮೊಗರು ಗ್ರಾಮಕ್ಕೆ ಸಂಪರ್ಕ ಕಾಲುಸಂಕಕ್ಕೆ 18 ಲಕ್ಷ ರೂ., ಕೈಂದಾಡಿ ಎಂಬಲ್ಲಿ ಕಾಲುಸಂಕಕ್ಕೆ 10 ಲಕ್ಷ ರೂ., ಗಡಿಪಿಲ ಬಲೆರಾವು ಸಾರಾಕೂಟೇಲು ಪ.ಜಾತಿ ಕಾಲನಿ ರಸ್ತೆಗೆ 80 ಲಕ್ಷ ರೂ., ವೀರಮಂಗಲ ದ.ಕ.ಜಿ.ಪ ಹಿ.ಪ್ರಾ. ಶಾಲೆ ಬಳಿ ಸಭಾಭವನಕ್ಕೆ ಟೈಲ್ಸ್ ಮತ್ತು ಇಂಟರ್ ಲಾಕ್ ಅಳವಡಿಕೆಗೆ 5 ಲಕ್ಷ ರೂ., ಅಂಬೇಡ್ಕರ್ ಭವನಕ್ಕೆ 20 ಲಕ್ಷ ರೂ., ಆನಡ್ಕ ಶಾಲಾ ಕಟ್ಟಡ ದುರಸ್ತಿಗೆ 1 ಲಕ್ಷ ರೂ., ಆನಡ್ಕ ಅಂಗನವಾಡಿ ನೆಲ ರಿಪೇರಿಗೆ 50 ಸಾವಿರ ರೂ., ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ದುರಸ್ತಿಗೆ 1.50 ಲಕ್ಷ ರೂ., ವೀರಮಂಗಲ ಪ್ರಾಥಮಿಕ ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕೆ 5 ಲಕ್ಷ ರೂ., ವಿರಮಂಗಲ ಅಂಗನವಾಡಿಗೆ ಶುದ್ಧಿ ಕುಡಿಯುವ ನೀರಿನ ಘಟಕಕ್ಕೆ 40 ಸಾವಿರ ರೂ., ಆನಡ್ಕ ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 40 ಸಾವಿರ ರೂ., ಆನಾಜೆತಡ್ಕ ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 40 ಸಾವಿರ ರೂ., ಶಾಂತಿಗೋಡು ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 40 ಸಾವಿರ ರೂ., ವೀರಮಂಗಲ ಸ.ಹಿ.ಪ್ರಾ. ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 60 ಸಾವಿರ ರೂ., ದ.ಕ.ಜಿ.ಪ ಹಿ.ಪ್ರಾ. ಶಾಲೆಗೆ ಸ್ಮಾರ್ಟ್ ಕ್ಲಾಸ್ ಮತ್ತು ಇತರ ಸಾಮಾಗ್ರಿಗೆ 2.70 ಲಕ್ಷ ರೂ., ಶಾಂತಿಗೋಡು ಶಾಲೆಗೆ ಶುದ್ಧಿ ಕುಡಿಯುವ ನೀರು ಘಟಕಕ್ಕೆ 60 ಸಾವಿರ ರೂ., ಶಾಂತಿಗೋಡು ಶಾಲೆಗೆ ಸ್ಟಾರ್ಟ್ ಕ್ಲಾಸ್ ಮತ್ತು ಇತರ ಸಾಮಾಗ್ರಿಗೆ 2.70 ಲಕ್ಷ ರೂ., ಪಂಜಿಗ ಎಂಬಲ್ಲಿ ಸೇತುವೆ ಸಮೇತ ಕಿಂಡಿ ಅಣೆಕಟ್ಟಿಗೆ 195 ಲಕ್ಷ ರೂ., ಬಲೆರಾವು ಎಂಬಲ್ಲಿ ಸೇತುವೆ ಸಮೇತ ಕಿಂಡಿ ಕಣೆಕಟ್ಟಿಗೆ 330 ಲಕ್ಷ ರೂ., ವೀರಮಂಗಲ ಎರ್ಮೆಡ್ಕ ಎಂಬಲ್ಲಿ ಪ.ಜಾತಿ ಕಾಲನಿ ತಡೆಗೋಡೆಗೆ 20 ಲಕ್ಷ ರೂ., ಶಾಂತಿಗೋಡು ಉಪ ಆರೋಗ್ಯ ಕೇಂದ್ರದ ದುರಸ್ತಿ ಮತ್ತು ವೆಲ್ನೆಸ್ ಕೊಠಡಿ ನಿರ್ಮಾಣಕ್ಕೆ 1.80 ಲಕ್ಷ ರೂ., ವೀರಮಂಗಲ ಕೋಯಕುಡೆ ರಸ್ತೆಗೆ 10 ಲಕ್ಷ ರೂ., ಕೈಮಾರ ರಸ್ತೆಗೆ 10 ಲಕ್ಷ ರೂ., ಕೂಡುರಸ್ತೆ ಆನಡ್ಕ ಸಂಪರ್ಕ ರಸ್ತೆಗೆ ಕೂಡುರಸ್ತೆ ಎಂಬಲ್ಲಿ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಆನಡ್ಕದಿಂದ ಬಿರ್ಮಣಕಜೆ ಕಠಾರ ರಸ್ತೆಗೆ 10 ಲಕ್ಷ ರೂ., ವಿಷ್ಣುನಗರದಿಂದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಹೋಗುವ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಪೇರಡ್ಕ ದರ್ಖಾಸು ಚೋಮಡ್ಕ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಶಾಂತಿಗೋಡು ಶಾಲಾ ನೂತನ ಕೊಠಡಿಗೆ 13.90 ಲಕ್ಷ ರೂ., ಪುರುಷರಕಟ್ಟೆ ಆನಡ್ಕ ರಸ್ತೆ ಅಭಿವೃದ್ಧಿ ಮುಂದುವರಿದ ಕಾಮಗಾರಿಗೆ 7.20 ಲಕ್ಷ ರೂ., ಪಲಸಡ್ಕ ರಸ್ತೆ ದುರಸ್ತಿಗೆ 5 ಲಕ್ಷ ರೂ., ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಡು 1845.32 ಅನುದಾನ ಮಂಜೂರುಗೊಂಡಿದೆ.
ನರಿಮೊಗರು ಗ್ರಾಮಕ್ಕೆ ಶಾಸಕರ ಅನುದಾನದಡಿ 2018ರಿಂದ 23ರವರೆಗೆ ಬಿಡುಗಡೆಯಾದ ಅನುದಾನದ ವಿವರ ಇಂತಿವೆ:
ಬಜಪ್ಪಳ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 10 ಲಕ್ಷ ರೂ., ಪಂಜಳ ಸಾಂದೀಪನಿ ರಸ್ತೆಗೆ 4.75 ಲಕ್ಷ ರೂ., ಪರಮಾರ್ಗ ಕುಕ್ಕುತಡಿ ರಸ್ತೆಗೆ 4.75 ಲಕ್ಷ ರೂ., ನೆಕ್ಕಿಲು ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ 10 ಲಕ್ಷ ರೂ., ಶಾಂತಿಗೋಡು ವಿಷ್ಣುಮೂರ್ತಿ ದೇವಾಲಯದ ಬಳಿ ತೋಡಿಗೆ ಕಾಲುಸಂಕ ರಚನೆಗೆ 3 ಲಕ್ಷ ರೂ., ಬಜಪ್ಪಳ ಪಾದೆ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಮಾಡತ್ತಾರು ಕೆಂಬ್ಡಾಜೆ ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಕಲ್ಲುಗುಡ್ಡೆ ಬಾರಿಕೆಮಜಲು ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಆನಾಜೆ ಅರಿಪೆಕಟ್ಟೆ ರಸ್ತೆ ಅಭಿವೃದ್ಧಿಗೆ 15.50 ಲಕ್ಷ ರೂ., ಉದ್ದಮಜಲು ಕೈಪಂಗಳ ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಮುಕ್ವೆ ಪಂಚವಟಿ (ಎಲಿಕ) ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಮುಕ್ವೆ ಪಂಚವಟಿ ಮುಗೇರಡ್ಕ ರಸ್ತೆ ಅಭಿವೃದ್ಧಿಗೆ 5.50 ಲಕ್ಷ ರೂ., ಆನಾಜೆ ಅರಿಪೆಕಟ್ಟೆ ಎಂಬಲ್ಲಿ ಸೇತುವೆ ರಚನೆಗೆ 15.50 ಲಕ್ಷ ರೂ. ಕೊಯಿಕೊಡೆ (ನೀರ ಕುಜ್ಜುತ್ತಡಿ) ಎಂಬಲ್ಲಿ ಕಾಲುಸಂಕಕ್ಕೆ 5 ಲಕ್ಷ ರೂ., ಕುಕ್ಕುದಡಿ ಎಂಬಲ್ಲಿ ಕಾಲುಸಂಕಕ್ಕೆ 18.03 ಲಕ್ಷ ರೂ., ಮಾಡತ್ತಾರು ಕೆಮಾಜೆ ರಸ್ತೆ ಅಭಿವೃದ್ಧಿ ಮುಂದುವರೆದ ಕಾಮಗಾರಿಗೆ 4 ಲಕ್ಷ ರೂ., ನೆಕ್ಕಿಲು ಪುರುಷರಕಟ್ಟೆ ರಸ್ತೆ ಕಾಂಕ್ರಿಟೀಕರಣ ಮುಂದುವರೆದ ಕಾಮಗಾರಿಗೆ 3 ಲಕ್ಷ ರೂ., ನೆಕ್ಕಿಲು ಇಂದಿರಾನಗರ ಪ.ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ 4.50 ಲಕ್ಷ ರೂ., ಐಟಿಐನಿಂದ ಪರಮಾರ್ಗದವರೆಗೆ ರಸ್ತೆ ದುರಸ್ತಿಗೆ 5 ಲಕ್ಷ ರೂ., ಪರಮಾರ್ಗ ಪೇರಡ್ಕ ದರ್ಖಾಸು ರಸ್ತೆ ದುರಸ್ತಿಗೆ 5 ಲಕ್ಷ ರೂ., ಮುಕ್ವೆ ಎಂ.ಜಿ. ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಮುಕ್ವೆ ದೋಳ್ತೊಟ್ಟು ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಪಂಜಳ ಶಿಬರ ರಸ್ತೆ ಕಾಂಕ್ರಿಕಟೀಕರಣಕ್ಕೆ 7 ಲಕ್ಷ ರೂ., ನರಿಮೊಗರು ಪೇರಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ 7 ಲಕ್ಷ ರೂ., ಐಟಿಐ ಕಾಲೇಜು ಟೆಕ್ ಲ್ಯಾಬ್ ನಿರ್ಮಾಣ ಮಾಡಲು ಜಮೀನು ಸಮತಟ್ಟುಗೆ 5 ಲಕ್ಷ ರೂ., ಐಟಿಐ ಕಾಲೇಜು ಉನ್ನತೀಕರಣಕ್ಕೆ 91.77 ಲಕ್ಷ ರೂ., ಪೇರಡ್ಕ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ., ನೈತಾಡಿ ಬಾರಿಕೆಮಜಲು ಪ.ಜಾತಿ ಕಾಲನಿ ರಸ್ತೆಗೆ 80 ಲಕ್ಷ ರೂ., ಮುಕ್ವೆ ಹಿ.ಪ್ರಾ.ಶಾಲಾ ದುರಸ್ತಿಗೆ 1 ಲಕ್ಷ ರೂ., ಮುಕ್ವೆ ಸ.ಹಿ.ಪ್ರಾ.ಶಾಲೆಯ ವಿಕಲಚೇತನರಿಗೆ ಶೌಚಾಲಯ ರಚನೆಗೆ 1.679 ಲಕ್ಷ ರೂ., ಆನಾಜೆಯಲ್ಲಿ ನೀರಿನ ಟ್ಯಾಂಕ್ ರಚನೆಗೆ 2.916 ಲಕ್ಷ ರೂ., ಗ್ರಾಪಂ ಗ್ರಂಥಾಲಯ ಡಿಜಿಟಲೀಕರಣಕ್ಕೆ 3 ಲಕ್ಷ ರೂ., ಒತ್ತೆಮುಂಡೂರು ರಸ್ತೆ ಅಭಿವೃದ್ಧಿಗೆ 50 ಸಾವಿರ ರೂ., ಮುಕ್ವೆ ಎಲಿಕ ರಸ್ತೆ ಕಾಂಕ್ರಿಟೀಕರಣಕ್ಕೆ 50 ಸಾವಿರ ರೂ., ಬಜಪ್ಪಳ ಪಾದೆಯಲ್ಲಿ ಮೋರಿ ರಚನೆಗೆ 1 ಲಕ್ಷ ರೂ., ಚಪ್ಪರಕುಕ್ಕು ರಸ್ತೆ ಕಾಂಕ್ರಿಟೀಕರಣಕ್ಕೆ 1.10 ಲಕ್ಷ ರೂ., ಬಾರಿಕೆಮಜಲು ಪ.ಜಾತಿ ಕಾಲನಿ ನೀರಿನ ಟ್ಯಾಂಕ್ ರಚನೆಗೆ 1.08 ಲಕ್ಷ ರೂ., ನರಿಮೊಗ್ರು ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ., ಕೂಡುರಸ್ತೆ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ., ಪುರುಷರಕಟ್ಟೆ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ.,ಪರಮಾರ್ಗ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ.,ಪಂಜಳ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ., ಮುಕ್ವೆ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 40 ಸಾವಿರ ರೂ., ದ.ಕ.ಹಿ.ಪ್ರಾ.ಶಾಲೆ ಮುಕ್ವೆ ಶಾಲೆಗೆ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 60 ಸಾವಿರ ರೂ., ಮುಕ್ವೆ ಹಿ.ಪ್ರಾ. ಶಾಲೆಗೆ ಸ್ಮಾರ್ಟ್ ಕ್ಲಾಸ್ ಮತ್ತು ಇತರ ಸಾಮಾಗ್ರಿಗೆ 2.70 ಲಕ್ಷ ರೂ., ನರಿಮೊಗರು ಹಿ. ಪ್ರಾ. ಶಾಲೆಗೆ ಅಂಗನವಾಡಿಗೆ ಶುದ್ಧಿ ನೀರಿನ ಘಟಕಕ್ಕೆ 60 ಸಾವಿರ ರೂ., ನರಿಮೊಗರು ಹಿ.ಪ್ರಾ. ಶಾಲೆಗೆ ಸ್ಮಾರ್ಟ್ ಕ್ಲಾಸ್ ಮತ್ತು ಇತರ ಸಾಮಾಗ್ರಿಗೆ 2.70 ಲಕ್ಷ ರೂ.,, ಕೈಪಂಗಳ ಆನಾಜೆಯಲ್ಲಿ ಕಿಂಡಿ ಅಣೆಕಟ್ಟು ರಚನೆಗೆ 80 ಸಾವಿರ ರೂ., ಚಂದ್ರಮ್ ನಾಗ್ ಬಳಿ ಕೃಷಿ ಭೂಮಿ ಸಂರಕ್ಷಣಾ ತಡೆಗೋಡೆಗೆ 18 ಲಕ್ಷ ರೂ., ಒತ್ತೆಮುಂಡೂರು ಅಪ್ಪಿ ಅವರ ಕೃಷಿ ಭೂಮಿ ಸಂರಕ್ಷಣಾ ತಡೆಗೋಡೆಗೆ 10 ಲಕ್ಷ ರೂ., ಶಿಬರ ಕೋಲಾಡಿ ರಸ್ತೆಗೆ 10 ಲಕ್ಷ ರೂ., ಪೆರಿಯಡ್ಕ ಶೆಟ್ಟಿಮಜಲು ರಸ್ತೆಗೆ 10 ಲಕ್ಷ ರೂ., ಇಂದಿರಾನಗರ ಒಂದನೇ ಅಡ್ಡರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ., ಬಜಪ್ಪಳ ರಸ್ತೆಗೆ 10 ಲಕ್ಷ ರೂ.,ಮುಕ್ವೆ ಮುಗೇರಡ್ಕ ರಸ್ತೆಗೆ 10 ಲಕ್ಷ ರೂ., ಮುಕ್ವೆ ಓಂಕಾರ್ ರಸ್ತೆಗೆ 10 ಲಕ್ಷ ರೂ., ಎಳಕ ಪಂಚವಟಿ ರಸ್ತೆಗೆ 10 ಲಕ್ಷ ರೂ., ಬೊಳಿಂಜ ಎಲಿಕ ರಸ್ತೆಗೆ 10 ಲಕ್ಷ ರೂ., ಪರಮಾರ್ಗದಿಂದ ಒತ್ತೆಮುಂಡೂರು ರಸ್ತೆಗೆ 10 ಲಕ್ಷ ರೂ., ಪೇರಡ್ಕ ಎರುಕಡಪು ರಸ್ತೆಗೆ 10 ಲಕ್ಷ ರೂ., ಅರಿಪೆಕಟ್ಟೆ ಆನಾಜೆ ರಸ್ತೆಗೆ 10 ಲಕ್ಷ ರೂ.,, ಅಳಜೆ ಕುಜುಂಬಗದ್ದೆ ರಸ್ತೆಗೆ 10 ಲಕ್ಷ ರೂ.,, ಕೊಡಿಮಜಲು ಪ.ಜಾತಿ ಕಾಲನಿ ಟ್ಯಾಂಕ್ ರಚನೆಗೆ 2 ಲಕ್ಷ ರೂ., ನೆಕ್ಕಿಲು ಇಂದಿರಾನಗರ ಪ.ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ 4.40 ಲಕ್ಷ ರೂ., ಐಟಿಐನಿಂದ ಪಾದೆ ರಸ್ತೆ ದುರಸ್ತಿಗೆ 10 ಲಕ್ಷ ರೂ., ಐಟಿಐನಿಂದ ಬಜಪ್ಪಳ ರಸ್ತೆಗೆ 25 ಸಾವಿರ ರೂ., ಐಟಿಐ ಉನ್ನತೀಕರಣ ಟೆಕ್ ಲ್ಯಾಬ್ ಉಪಕರಣ ಮತ್ತು ಸಲಕರಣೆಗೆ 3400 ಲಕ್ಷ ರೂ. ಹೀಗೆ ಒಟ್ಟು 4117.48 ಕೋಟಿ ರೂ. ಅನುದಾನ ಮಂಜೂರಾಗಿದೆ.