ಪುತ್ತೂರು: ರಾಜ್ಯದ ಹೆಸರಾಂತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಎಲ್ಲ ಶೋರೂಂಗಳಲ್ಲಿ ಮಾರ್ಚ್ 22ರಂದು ಯುಗಾದಿ ಒನ್ ಡೇ ವಿಶೇಷ ಆಫರ್ ನೀಡುತ್ತಿದೆ. ಪ್ರತಿ ಖರೀದಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟಾರೆಯಾಗಿ 100 ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ. ಪ್ರತಿ Walk-inಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ ನೀಡಲಾಗುತ್ತಿದೆ. ಈ ಆಫರ್ ನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಮುಳಿಯ ಶೋ ರೂಂನ ಪ್ರಬಂಧಕರನ್ನು ಸಂಪರ್ಕಿಸಬಹುದು.
ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದೆ. ಗ್ರಾಹಕರು ಯುಗಾದಿ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಆಭರಣಗಳ ಖರೀದಿಗಾಗಿ ಮುಳಿಯ ಜ್ಯುವೆಲ್ಸ್‌ನ ಮಳಿಗೆಗಳಿಗೆ ಹಬ್ಬದ ದಿನ ತಪ್ಪದೇ ಭೇಟಿ ನೀಡುವಂತೆ ಮುಳಿಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಅಂದಹಾಗೇ, ಈ ಆಫರ್ ಯುಗಾದಿಯ ಒಂದು ದಿನ ಮಾತ್ರ ಲಭ್ಯವಿದೆ.