ಆಝಾನ್‌ ಕೂಗಿದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧಿ

ಶಿವಮೊಗ್ಗ : ಹಿರಿಯ ನಾಯಕ ಈಶ್ವರಪ್ಪನವರ ಹೇಳಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದ ಸ್ಥಳವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ್ದಾರೆ.
ಪೊಲೀಸರ ಪ್ರತಿರೋಧದ ನಡುವೆಯೂ ಗೋಮೂತ್ರ ಸಿಂಪಡಣೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಜಾನ್ ಕೂಗಿದ್ದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗೋಮೂತ್ರ ಸಿಂಪಡಣೆ ಮಾಡದಂತೆ ತಡೆಯಲು ಮುಂದಾದರು. ಆದರೂ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಘೋಷಣೆಗಳನ್ನು ಕೂಗಿದರು.
ಶಾಂತಿ ಕದಡಲು ಕೋಮುವಾದಿಗಳು ಆಜಾನ್ ಪಠಿಸಿದ್ದಾರೆ. ಇದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಜರಂಗದಳದ ಮುಖಂಡ ರಾಜೇಶ್‌ ಗೌಡ ಮಾತನಾಡಿ, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಜಿಲ್ಲಾಧಿಕಾರಿ ಕಚೇರಿ ಎದುರು ಆಜಾನ್‌ ಹೇಳುವ ಮೂಲಕ ಕೋಮುವಾದ ಪ್ರದರ್ಶಿಸಲಾಗಿದೆ. ಇದು ಆಜಾನ್‌ ಹೇಳುವ ಸ್ಥಳವಲ್ಲ, ಹೀಗಾಗಿ ಸ್ಥಳವನ್ನು ಶುದ್ಧೀಕರಿಸಿದ್ದೇವೆಂದು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top