ಸಂಟ್ಯಾರ್ ನಲ್ಲಿ ಗಿರೀಶ್ ಗೌಡ ಮರಿಕೆ  ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಪುತ್ತೂರು: ಸಂಟ್ಯಾರ್ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಗಿರೀಶ್ ಗೌಡ ಮರಿಕೆ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶನಿವಾರ ಸಂಟ್ಯಾರ್ ನಲ್ಲಿ ನಡೆಯಿತು.

ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಪಂದ್ಯಾಟ ಉದ್ಘಾಟಿಸಿ, ಪುತ್ತೂರು: ಇಡೀ ಯುವ ಸಮುದಾಯ ಮತ್ತೊಮ್ಮೆ ಕ್ರೀಡೆಗೆ ಒತ್ತು ಕೊಟ್ಟು ಇಂದು ಈ ಭಾಗದಲ್ಲಿ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿರುವುದು  ಶ್ಲಾಘನೀಯ. ಇಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ  ಸಾಧನೆ ಮಾಡುವ ಮೂಲಕ ನಮ್ಮ ಊರಿಗೆ ಹೆಸರನ್ನು ತರುವ ಜತೆಗೆ ನಮ್ಮ ತಂದೆ  ತಾಯಿಗೂ  ಗೌರವ ತರುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಯಂತ ಶೆಟ್ಟಿ ಕಂಬಳದಡ್ಡ, ಸಹಜ್ ರೈ ಬಳೆಜ್ಜ, ಮಾಜಿ ತಾಲೂಕು ಪಾಚಾಯಿತಿ ಅಧ್ಯಕ್ಷ  ರಾಧಾಕೃಷ್ಣ ಬೋರ್ಕರ್  ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top