ಪುತ್ತೂರು : ಪಂಚೋಡಿ ಗಾಳಿಮುಖ ರಸ್ತೆಗೆ ಶೀಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿಧಾನ ಸಭಾ ಕ್ಷೆತ್ರದಲ್ಲಿ ರಸ್ತೆಗೆ ಆದ್ಯತೆ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಿದೆ. ಮುಂದಿನ 25 ವರ್ಷ ಬಾಳ್ವಿಕೆ ಬರುವ ಹಾಗೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಬಾರ್ಡ್ ಯೋಜನೆಯಡಿ 3.88 ಕೋಟಿ ಅನುದಾನ ಪೂರ್ತಿ ಒಂದೇ ರಸ್ತೆ ಗೆ ಇಡುವ ಕೆಲಸ ಆಗಿದೆ ಎಂದರು.
ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಂತ್ಯಾ, ಪಿ ಡಬ್ಲ್ಯೂ, ಡಿ ಇಂಜಿನಿಯರ್ ಬಾಲಕೃಷ್ಣ ಭಟ್, ಖಾದರ್ ಕರ್ನೂರು, ಸುರೇಶ್ ಆಳ್ವಾ, ಯತ್ರಿಂದ್ರ ಕೊಚ್ಚಿ, ಶಕ್ತಿಕೇಂದ್ರ ಸಂಚಾಲಕ ಪ್ರದೀಪ್ ರೈ ಕರ್ನೂರು, ಮೋಹನ್ ನಾಯರ್, ಪಂಚಾಯತ್ ಸದಸ್ಯರಾದ ಕುಮಾರನಾಥ ಪೂಜಾರಿ, ವೆಂಕಪ್ಪ ನಾಯ್ಕ ಮೇನಾಲ, ಹಾಗೂ ಪ್ರಪುಲ್ಲ ರೈ ಮದಕ, ದೀಪಕ್ ಕುಮಾರ್ ಮುಂಡ್ಯ, ವಂದಿಸಿದರು.