ದೆಹಲಿ: 2022-23ನೇ ಸಾಲಿನ ದೆಹಲಿಯ ಆರ್ಥಿಕ ಸಮೀಕ್ಷೆಯ ಪ್ರಕಾರ, ದೆಹಲಿ ಸರ್ಕಾರವು ಬಜೆಟ್ ನ ಶೇ. 20.5 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದು, ಇದು ದೇಶದ ಇತರ ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚು ಎಂದು ಹೇಳಿದೆ.
ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾದ ಸಮೀಕ್ಷಾ ವರದಿಯಲ್ಲಿ, ದೆಹಲಿ ಕೌಶಲ್ಯ ಮತ್ತು ವಾಣಿಜ್ಯೋದ್ಯಮ ವಿಶ್ವವಿದ್ಯಾನಿಯವು ತನ್ನ ಪ್ರವೇಶ ಸಾಮರ್ಥ್ಯವನ್ನು ಹೆಚ್ಚಿಸಿದೆ. 2021-22 ರ ಶೈಕ್ಷಣಿಕ ಅವಧಿಯಲ್ಲಿ ಸರ್ಕಾರಿ ಶಾಲೆಗಳ 12ನೇ ತರಗತಿಯ ಉತ್ತೀರ್ಣ ಫಲಿತಾಂಶ ಶೇ. 98 ರಷ್ಟು ಮತ್ತು 10 ನೇ ತರಗತಿಯ ಫಲಿತಾಂಶ ಶೇ. 97 ರಷ್ಟು ಇದೆ ಎಂದು ಅದು ಉಲ್ಲೇಖಿಸಿದೆ.
2022-23ರ ಶೈಕ್ಷಣಿಕ ಅವಧಿಯಲ್ಲಿ EWS ಮತ್ತು DG ವಿಭಾಗದ ಅಡಿಯಲ್ಲಿ 32,406 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 2021-22ರಲ್ಲಿ 6,258 ಇದ್ದು ಪ್ರವೇಶ ಸಾಮರ್ಥ್ಯವನ್ನು 2022-23ರ ಅವಧಿಯಲ್ಲಿ 7,933ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.