ಪಂಜದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಸಮಾವೇಶ | ದೇಶವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವುದು ಬಿಜೆಪಿಯ ಗುರಿ: ಕೇಂದ್ರ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ | ಆರೋಪಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ: ಸಚಿವ ಅಂಗಾರ

ಸುಳ್ಯ: ಭಾರತವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವುದು ಬಿಜೆಪಿ ಸರಕಾರದ ಉದ್ದೇಶ ಎಂದು ಕೇಂದ್ರ ಪ್ರವಾಸೋದ್ಯಮ, ಬಂದರು, ಹಡಗು ಮತ್ತು ಜಲ ಮಾರ್ಗಗಳ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಭಾನುವಾರ ಪಂಜ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಈಗ ವಿಶ್ವದ ಶ್ರೇಷ್ಠ ದೇಶವಾಗಿ ಬೆಳೆಯುತಿದೆ. ಎಂದ ಅವರು, ಈ ಹಿಂದೆ ವಾಜಪೇಯಿ ಸರಕಾರ ಹಾಗು ಈಗ ನರೇಂದ್ರ ಮೋದಿ ಸರಕಾರ ಮಹಿಳಾ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ದೇಶದ ಅಭಿವೃದ್ಧಿಗೆ, ಸರಕಾರದ ಸಾಧನೆಗೆ, ಸಂಘಟನೆಯ ಸಂಘಟನೆ ಪ್ರೇರಣೆ. ಸ್ವಾತಂತ್ರ್ಯ ಗಳಿಸಲು ಹಲವಾರು ಮಹಿಳೆಯರು ತ್ಯಾಗ ಮಾಡಿದ್ದಾರೆ.ಅದೇ ರೀತಿ ಪಕ್ಷದ ಬೆಳವಣಿಗೆಗೆ, ದೇಶದ ಅಭಿವೃದ್ಧಿಗೆ ಮಹಿಳೆಯರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.



































 
 

ಬಂದರು,ಮೀನುಗಾರಿಕೆ‌ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ಸಹಿಸಲಾಗದೆ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಈ ರೀತಿಯ ಆರೋಪಗಳನ್ಬು ಸವಾಲಾಗಿ ಸ್ವೀಕರಿಸಿ ಅದಕ್ಕೆ ನಾವು ಮಾಡಿದ ಅಭಿವೃದ್ಧಿಯನ್ನು ತೋರಿಸಿ ಕಾರ್ಯಕರ್ತರು ಸಮಾಜಕ್ಕೆ ತಿಳುವಳಿಕೆ ನೀಡಬೇಕು ಎಂದರು. ಬಿಜೆಪಿ ಆಡಳಿತ ಮಾಡಿದ ಸಂದರ್ಭದಲ್ಲಿ ಮಾತ್ರ ದೇಶದಲ್ಲಿ ಅಭಿವೃದ್ಧಿ ನಡೆದಿದೆ. ಮಹಿಳಾ ಸಮಾವೇಶ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿವಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಬಂಟ್ಚಾಳ, ಕಸ್ತೂರಿ ಪಂಜ, ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ರಾಧಾಕಾಕೃಷ್ಣ ಬೂಡಿಯಾರು, ಕಾರ್ಯದರ್ಶಿಗಳಾದ ಮುಳಿಯ ಕೇಶವ ಭಟ್, ಪೂಜಾ ಪೈ, ಮಂಗಳ,ಪ್ರಮುಖರಾದ ರವೀಂದ್ರ ಪೈ, ಈಶ್ವರ ಕಟೀಲ್, ಗೋಪಾಲಕೃಷ್ಣ ಹೇರಳೆ, ಸುಲೋಚನಾ ಭಟ್, ಜಯಂತಿ ನಾಯಕ್, ಭಾಗೀರಥಿ ಮುರುಳ್ಯ, ಸುಳ್ಯ ತಾಲೂಕು ಮಹಿಳಾಮೋರ್ಚಾ ಅಧ್ಯಕ್ಷೆ ಶುಭದಾ ಎಸ್.ರೈ, ಕಾರ್ಯದರ್ಶಿಗಳಾದ ಗೀತಾ ಶೇಖರ್, ತೇಜಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಣವತಿ ಕೊಲ್ಲಂತ್ತಡ್ಕ ಹಾಗು ಸೇವಂತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರತಿ ಕ್ಷೇತ್ರದ ಜನ ಸೇವೆ ಮಾಡಿದ, ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸುಷ್ಮಾ ಸ್ವರಾಜ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆತ್ಮ ನಿರ್ಭರ ಭಾರತದ ನೆಲೆಯಲ್ಲಿ ಸ್ವಯಂ ಉದ್ಯೋಗ ಮಾಡುವ ಮೂಲಕ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಸಮಾವೇಶದಲ್ಲಿ ಏರ್ಪಡಿಸಲಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top